ಬನಶಂಕರಿ ಜಾತ್ರೆಯಲ್ಲಿ ‘ಹಸಿರು ಸಂದೇಶ’ – ನಿಸರ್ಗ ಬಳಗದ ಜಾಗೃತಿ ಅಭಿಯಾನ


Petkarmedia:ನಿಸರ್ಗ ಬಳಗ ಪರಿಸರ ವೇದಿಕೆಯ ವತಿಯಿಂದ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಅಭಿಯಾನ.

ಬಾದಾಮಿ: ಬಾದಾಮಿಯಲ್ಲಿನ ಶ್ರೀ ಬನಶಂಕರಿ ದೇವಿ ದೇವಸ್ಥಾನ ಜಾತ್ರೆಯ ಪ್ರಯುಕ್ತ, ನಿಸರ್ಗ ಬಳಗ ಪರಿಸರ ವೇದಿಕೆಯ ವತಿಯಿಂದ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಅಭಿಯಾನವನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.

ಜಾತ್ರಾ ಆವರಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಪೋಸ್ಟರ್‌ಗಳು ಮತ್ತು ಭಿತ್ತಿಚಿತ್ರಗಳ ಮೂಲಕ ಜಲಜಾಗೃತಿ, ಹಸಿರೀಕರಣ, ಸಾವಯವ ಕೃಷಿ, ಸ್ವಚ್ಛತೆ, ಪ್ಲಾಸ್ಟಿಕ್ ನಿಷೇಧ ಸೇರಿದಂತೆ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ನೂರಾರು ಘೋಷವಾಕ್ಯಗಳನ್ನು ಪ್ರದರ್ಶಿಸಲಾಯಿತು.

“ಕಾಡಿದ್ದರೆ ನಾವಿಲ್ಲಿ, ಕಾಡಿಲ್ಲದಿರೆ ನಾವೆಲ್ಲಿ”, “ನೀರಿದ್ದರೆ ನಾಳೆ”, “ಎಲ್ಲೆಂದರಲ್ಲಿ ಕಸ ಎಸೆಯುವವರ ಮಾನ ಕಸಕ್ಕಿಂತ ಕಡೇ” ಸೇರಿದಂತೆ ಪರಿಣಾಮಕಾರಿ ಸಂದೇಶಗಳನ್ನು ಒಳಗೊಂಡ ಸಾವಿರಾರು ಪೋಸ್ಟರ್‌ಗಳು ಯಾತ್ರಾರ್ಥಿಗಳ ಗಮನ ಸೆಳೆಯುವಂತಾಗಿದ್ದವು.

ಈ ಜಾಗೃತಿ ಅಭಿಯಾನಕ್ಕೆ ಸಾರ್ವಜನಿಕರಿಂದ ದೂರವಾಣಿ ಮೂಲಕವೂ ಪ್ರಶಂಸೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ ಎಂದು ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್. ವಾಸನ ತಿಳಿಸಿದ್ದಾರೆ.

ಅಭಿಯಾನದಲ್ಲಿ ನಿಸರ್ಗ ಬಳಗದ ಸದಸ್ಯರು, ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಚೊಳಚಗುಡ್ಡ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.


Petkarmedia: ಸ್ಥಳೀಯ ಸುದ್ದಿಗಳಿಗಾಗಿ ನೋಡಿ.

ಕಾಮೆಂಟ್‌ಗಳು