ತರಕಾರಿಗಳಲ್ಲೇ ಭಕ್ತಿ, ಸಂಸ್ಕೃತಿಯಲ್ಲೇ ಶಕ್ತಿ: ಬಾದಾಮಿಯ ಬನಶಂಕರಿ ಪಲ್ಲೇದ ಹಬ್ಬ

ಬಾದಾಮಿ: ನಾಳೆ 3  ಜಾತ್ರೆಯ ಪೂರ್ವಭಾವಿಯಾಗಿ ಬನಶಂಕರಿ ದೇವಸ್ಥಾನದಲ್ಲಿ ದೇವಿಗೆ ತರಕಾರಿ ಅಲಂಕಾರ ಪೂಜೆ (ಪಲ್ಲೇದ ಹಬ್ಬ) ಭಕ್ತಿಭಾವ ಮತ್ತು ವೈಭವದಿಂದ ಜರುಗಿತು. ಉತ್ತಮ ಮಳೆ, ಸಮೃದ್ಧ ಬೆಳೆ, ನೀರಿನ ಲಭ್ಯತೆ ಹಾಗೂ ಜನರ ಸಂಕಷ್ಟ ನಿವಾರಣೆಗೆ ಪ್ರಾರ್ಥನೆಯಾಗಿ ಈ ವಿಶಿಷ್ಟ ಪೂಜೆಯನ್ನು ಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ.

Petkarmedia:ಬನಶಂಕರಿ ದೇವಸ್ಥಾನದಲ್ಲಿ ದೇವಿಗೆ ತರಕಾರಿ ಅಲಂಕಾರ ಪೂಜೆ (ಪಲ್ಲೇದ ಹಬ್ಬ) ಭಕ್ತಿಭಾವ ಮತ್ತು ವೈಭವದಿಂದ ಜರುಗಿತು.

ಪೌರಾಣಿಕ ನಂಬಿಕೆಯಂತೆ, ದೇವಿಯ ಕರುಣೆಯಿಂದ ಮಳೆ–ಬೆಳೆ ಸಮೃದ್ಧಿಯಾಗುತ್ತದೆ ಎಂಬ ವಿಶ್ವಾಸದಿಂದ ದೇವಿಯ ವಿಗ್ರಹವನ್ನು ಬದನೆಕಾಯಿ, ಸೌತೆಕಾಯಿ, ನಿಂಬೆ, ಮೆಣಸಿನಕಾಯಿ ಸೇರಿದಂತೆ 50ಕ್ಕೂ ಹೆಚ್ಚು ಬಗೆಯ ತರಕಾರಿಗಳು ಹಾಗೂ ಹೂವಿನ ಹಾರಗಳಿಂದ ಅಲಂಕರಿಸಲಾಯಿತು.

ಪಲ್ಲೇದ ಹಬ್ಬವು ಸಾಂಸ್ಕೃತಿಕ ಸೌಹಾರ್ದತೆಯ ಪ್ರತೀಕವಾಗಿದ್ದು, ದೇವಿಗೆ ತರಕಾರಿಗಳಿಂದ ತಯಾರಿಸಿದ ವಿವಿಧ ಭಕ್ಷ್ಯಗಳನ್ನು ನೈವೇದ್ಯವಾಗಿ ಸಮರ್ಪಿಸಲಾಯಿತು.

ಈ ವಿಶೇಷ ಅಲಂಕಾರ ಪೂಜೆಯನ್ನು ಕಣ್ತುಂಬಿಕೊಳ್ಳಲು ಬಾಗಲಕೋಟೆ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಭಕ್ತರ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.

ಪಲ್ಲೇದ ಹಬ್ಬದೊಂದಿಗೆ ಬನಶಂಕರಿ ಜಾತ್ರೆಯ ಸಂಭ್ರಮ ಮತ್ತಷ್ಟು ಹೆಚ್ಚಾಗಿದ್ದು, ರಥೋತ್ಸವದ ದಿನ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.


Petkarmedia: ಸ್ಥಳೀಯ ಸುದ್ದಿಗಳಿಗಾಗಿ ನೋಡಿ.


ಕಾಮೆಂಟ್‌ಗಳು