ಬಾಗಲಕೋಟೆ:ರಾಜ್ಯಪಾಲರಿಗೆ ಅವಮಾನ ದುರಾಡಳಿತದ ಪ್ರತಿಬಿಂಬ: ಗೋವಿಂದ ಕಾರಜೋಳ ಆಕ್ರೋಶ

ಬಾಗಲಕೋಟೆ: ರಾಜ್ಯಪಾಲರಿಗೆ ವಿಧಾನಸೌಧದಲ್ಲೇ ಅಡ್ಡಿಪಡಿಸಿದ ಘಟನೆ ಸರ್ಕಾರದ ದುರಾಡಳಿತಕ್ಕೆ ನಿದರ್ಶನವಾಗಿದೆ ಎಂದು ಚಿತ್ರದುರ್ಗ ಸಂಸದ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯಪಾಲರಿಗೆ ಕೂಡ ಗೌರವ ನೀಡದೆ ನಡೆದುಕೊಳ್ಳುವವರು ಶಾಸನಬದ್ಧವಾಗಿ ಆಡಳಿತ ನಡೆಸಲು ಸಾಧ್ಯವೇ?” ಎಂದು ಪ್ರಶ್ನಿಸಿದರು. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ರಾಜ್ಯಪಾಲರಿಗೆ ವಿಧಾನಸೌಧದಲ್ಲಿ ಅಡ್ಡಿಪಡಿಸಿರುವುದು ಖಂಡನೀಯ ಎಂದು ಹೇಳಿದರು. ಸರ್ಕಾರದ ಈ ವರ್ತನೆ ಸರಿಯಲ್ಲ. ಆಡಳಿತದಲ್ಲಿ ಶಿಸ್ತು, ಗೌರವ ಮತ್ತು ಸಂವಿಧಾನ ಪಾಲನೆ ಇರಬೇಕು. ಆದರೆ ಇವರು ಬರೀ ಗುಂಡಾಗರ್ತಿ, ಗುಂಡಾವರ್ತನೆಯ ಮೂಲಕ ಆಡಳಿತ ನಡೆಸಲು ಹೊರಟಿದ್ದಾರೆ ಎಂದು ಕಟುವಾಗಿ ಟೀಕಿಸಿದರು. ಇಂತಹ ದುರಾಡಳಿತಕ್ಕೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಕಾರಜೋಳ ಎಚ್ಚರಿಸಿದರು.

 #Bagalkot #GovernorIssue #VidhanaSoudha #GovindKarajol#Constitution #BadGovernance #KarnatakaPolitics#StatePolitics #Petkarmedia

ಕಾಮೆಂಟ್‌ಗಳು