ಬಾಗಲಕೋಟೆ: ನಗರದ ಓಂಕಾರ್ ಮಾನೆ ಫೌಂಡೇಶನ್ ವತಿಯಿಂದ ದಾಸೋಹ ದಿನದ ಅಂಗವಾಗಿ ಬಾಗಲಕೋಟೆ ರೈಲ್ವೆ ಸ್ಟೇಷನ್ ಸಮೀಪ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಡಾ. ಶೇಖರ್ ಮಾನೆ ಮಾತನಾಡಿ, ನಡೆದಾಡಿದ ದೇವರು, ತ್ರಿವಿಧ ದಾಸೋಹಿಗಳಾದ ಪದ್ಮಭೂಷಣ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜೀವನ ಮತ್ತು ಸೇವೆ ನಮಗೆ ಸದಾ ಆದರ್ಶಪ್ರಾಯವಾಗಿದೆ. ಅವರ ಪುಣ್ಯಸ್ಮರಣೆಯ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಅದೇ ನಿಟ್ಟಿನಲ್ಲಿ ಓಂಕಾರ್ ಮಾನೆ ಫೌಂಡೇಶನ್ ಅನ್ನ, ಅಕ್ಷರ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಈ ದಾಸೋಹ ದಿನದಂದು ಅನ್ನ ಸಂತರ್ಪಣೆ ಮಾಡುವ ಮೂಲಕ ಶ್ರೀಗಳ ಸೇವಾ ಸಂದೇಶವನ್ನು ಸ್ಮರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ವೈಶಾಲಿ ಮಾನೆ, ಫೌಂಡೇಶನ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಕೈಜೋಡಿಸಿದರು. ಸಾರ್ವಜನಿಕ ಸೇವೆಯ ಉದ್ದೇಶದಿಂದ ನಡೆಸಲಾದ ಈ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.
ಸ್ಥಳೀಯ ಸುದ್ದಿಗಳ ತಾಜಾ ಅಪ್‌ಡೇಟ್‌ಗಳಿಗಾಗಿ
👉 Petkarmedia.com ಸುದ್ದಿ ವೆಬ್‌ಸೈಟ್‌ಗೆ Follow ಮಾಡಿ
🗞️ ನಿಮ್ಮ ಊರಿನ ಸುದ್ದಿ – ನಿಮ್ಮ ಮೊಬೈಲ್‌ನಲ್ಲೇ
📢 ನಿಖರ | ವೇಗ | ವಿಶ್ವಾಸಾರ್ಹ ಸುದ್ದಿ
#BagalkoteNews
#OmkarManeFoundation
#DasohaDina
#Annadanam
#PublicService
#ShivakumaraSwamiji
#SocialService
#HumanityFirst
#RailwayStationService
#PetkarMedia
#LocalNews
#KarnatakaNews


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ