ಬಾದಾಮಿ:ಗಣರಾಜೋತ್ಸವದ ಸಂಭ್ರಮದೊಂದಿಗೆ ಕ್ರೀಡಾ ಸ್ಫೂರ್ತಿಯ ಹಬ್ಬ!

ಬಾದಾಮಿ: ತಾಲೂಕಿನ ಬೇಲೂರ ಗ್ರಾಮದಲ್ಲಿ ಗಣರಾಜೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಬಿ.ಪಿ.ಎಲ್ (BPL) ಸೀಸನ್–04 ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭವು ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ ಅವರು ಚಾಲನೆ ನೀಡಿದರು.

Petkarmedia:ಬಿ.ಪಿ.ಎಲ್ (BPL) ಸೀಸನ್–04 ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ನಡೆಯಿತು

ಈ ಸಂದರ್ಭದಲ್ಲಿ ಮಾತನಾಡಿದ ಅವರು,“ಕ್ರೀಡೆಗಳು ಕೇವಲ ಮನರಂಜನೆಗೆ ಸೀಮಿತವಾಗದೇ, ಯುವಕರಲ್ಲಿ ಶಿಸ್ತು, ಏಕತೆ, ಸಹಕಾರ ಮತ್ತು ಗೆಲುವಿನ ಛಲವನ್ನು ಬೆಳೆಸುವ ಮಹತ್ವದ ಸಾಧನವಾಗಿವೆ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಇಂತಹ ಕ್ರೀಡಾಕೂಟಗಳು ಉತ್ತಮ ವೇದಿಕೆಯಾಗಲಿ” ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಕ್ರೀಡಾಭಿಮಾನಿಗಳು, ಯುವ ಕ್ರೀಡಾಪಟುಗಳು ಹಾಗೂ ಯುವ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಪಂದ್ಯಾವಳಿಗೆ ಶುಭ ಕೋರಿದರು.


#Badami #Belur #BPLSeason4 #CricketTournament#RepublicDaySpecial #YouthPower #RuralSports#ಬಾದಾಮಿ #ಬೇಲೂರ #ಬಿಪಿಎಲ್ #ಕ್ರೀಡಾಕೂಟ #ಗಣರಾಜೋತ್ಸವ

📲 ಸುದ್ದಿ, ಹೆಡ್ಲೈನ್ ಹಾಗೂ ಸ್ಥಳೀಯ ಸುದ್ದಿಗಳಿಗಾಗಿ Petkarmedia ಫಾಲೋ ಮಾಡಿ

ಕಾಮೆಂಟ್‌ಗಳು