ಬಾಗಲಕೋಟೆ: ಬನಶಂಕರಿ ಜಾತ್ರೆಯಲ್ಲಿ ನಟಿ ಉಮಾಶ್ರೀ ಶರ್ಮಿಷ್ಠೆ’ ಅವರ ಎಂಬ ಏಕವ್ಯಕ್ತಿ ಪ್ರದರ್ಶ‌ನ

ಬಾಗಲಕೋಟೆ: ಬಾದಾಮಿ ಬನಶಂಕರಿ ಜಾತ್ರೆಯ ಅಂಗವಾಗಿ ಹಿರಿಯ ರಂಗಭೂಮಿ ಕಲಾವಿದೆ ಹಾಗೂ ನಟಿ ಉಮಾಶ್ರೀ ಅವರ ಅಭಿನಯದ ‘ಶರ್ಮಿಷ್ಠೆ’ ಎಂಬ ಏಕವ್ಯಕ್ತಿ ನಾಟಕವನ್ನು ಆಯೋಜಿಸಲಾಗಿದೆ.

ಸಾಂದರ್ಭಿಕ ಚಿತ್ರ

ರಂಗಸಂಪದ, ಬೆಂಗಳೂರು ಹಾಗೂ ಬಿಎಸ್ ಆರ್ ಗುಬ್ಬಿ ನಾಟಕ ಕಂಪನಿ ಇವರ ಸಹಕಾರದೊಂದಿಗೆ ನಾಟಕವನ್ನು ಪ್ರಸ್ತುತಪಡಿಸಲಾಗುತ್ತಿದ್ದು, ಜನವರಿ 18 ಮತ್ತು 19ರಂದು ಎರಡು ದಿನಗಳ ಕಾಲ ಬಾದಾಮಿ ಬನಶಂಕರಿ ಜಾತ್ರಾ ಆವರಣದಲ್ಲಿರುವ ಬಿಎಸ್ ಆರ್ ಗುಬ್ಬಿ ನಾಟಕ ಕಂಪನಿಯ ರಂಗವೇದಿಕೆಯಲ್ಲಿ ಪ್ರದರ್ಶನ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ 3.30ಕ್ಕೆ ನಾಟಕ ಆರಂಭವಾಗಲಿದೆ.

ಈ ನಾಟಕವು ಕೇವಲ ಎರಡು ದಿನಗಳು, ಪ್ರತಿ ದಿನ ಒಂದೇ ಪ್ರದರ್ಶನವಾಗಿ ನಡೆಯಲಿದ್ದು, ಪ್ರವೇಶ ದರವನ್ನು ರೂ.200 ಮತ್ತು ರೂ.300 ಎಂದು ನಿಗದಿಪಡಿಸಲಾಗಿದೆ ಎಂದು ರಂಗಭೂಮಿ ನಿರ್ದೇಶಕ ಜೇವರ್ಗಿ ರಾಜಣ್ಣ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಶರ್ಮಿಷ್ಠೆ’ ನಾಟಕದ ಕಥಾರಚನೆ ಬೇಲೂರ ರಘುನಂದನ್ ಅವರದ್ದು. ನಾಟಕದ ವಿನ್ಯಾಸ ಹಾಗೂ ನಿರ್ದೇಶನವನ್ನು ಚಿದಂಬರ ರಾವ್ ಜಂಬೆ ಅವರು ವಹಿಸಿಕೊಂಡಿದ್ದಾರೆ. ನಾಟಕಕ್ಕೆ ಅಗತ್ಯವಿರುವ ರಂಗವೇದಿಕೆ ವಿನ್ಯಾಸ, ಸಂಗೀತ ಹಾಗೂ ಕಲಾತ್ಮಕ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ರಾಜಣ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲಾವಿದೆ ರೇಣುಕಾ, ಶರಣಪ್ಪ ಮಾವೀನಮರದ, ಜಗದೀಶ ಹಿರೇಮಠ ಉಪಸ್ಥಿತರಿದ್ದರು.

#Sharmishthe#ಶರ್ಮಿಷ್ಠೆ#Umashree#ಶ್ರೀಮತಿ_ಉಮಾಶ್ರೀ#ಏಕವ್ಯಕ್ತಿ_ನಾಟಕ#KannadaTheatre#Badami#BanashankariJatre#ಬಾದಾಮಿ#ಬನಶಂಕರಿ_ಜಾತ್ರೆ#Bagalkote#BagalkoteNews#BSRGubbi#BSRGubbiNataka#Rangasampada#ರಂಗಭೂಮಿ#KannadaDrama#TheatreLovers#CulturalNews#ArtAndCulture#EventNews#LiveTheatre#PetkarMedia

ಕಾಮೆಂಟ್‌ಗಳು