ಬಾಗಲಕೋಟೆ:ವಸುದೈವ ಕುಟುಂಬಕಂ ಭಾರತೀಯ ಪರಂಪರೆಯ ಮೂಲಭೂತ ಮೌಲ್ಯ: ಸದ್ಗುರು ಮಧುಸೂಧನಸಾಯಿ

ಬಾಗಲಕೋಟೆ: ವಿಶಾಲ ಹೃದಯದಿಂದ ಇಡೀ ಜಗತ್ತನ್ನೇ ತನ್ನವರೆಂದು ಭಾವಿಸುವ ವಸುದೈವ ಕುಟುಂಬಕಂ ಭಾರತೀಯ ಪರಂಪರೆಯ ಮೂಲಭೂತ ಮೌಲ್ಯವಾಗಿದ್ದು, ಇಂತಹ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಬಿ.ವಿ.ವಿ.ಸಂಘದ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಚಿಕ್ಕಬಳ್ಳಾಪೂರದ ಮುದ್ದೇನಹಳ್ಳಿಯ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್, ಸತ್ಯಸಾಯಿ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಸದ್ಗುರು ಮಧುಸೂಧನಸಾಯಿ ಹೇಳಿದರು.

Petkarmedia: ಸದ್ಗುರು ಮಧುಸೂಧನಸಾಯಿ ಅವರಿಗೆ ಸಂಘ ಪರವಾಗಿ ಸನ್ಮಾನ.
Petkarmedia:ಪ್ರಕೃತಿ ಯೋಗವನದಲ್ಲಿ ಪೂಜೆ.

ಮಂಗಳವಾರ ಗದ್ದನಕೇರಿಯಲ್ಲಿನ ಬಿವಿವಿಎಸ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯ ಹಾಗೂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳ ಸಮೂಚ್ಚಯದಲ್ಲಿ ಬಿ.ವಿ.ವಿ.ಎಸ್ ಪ್ರಕೃತಿ ಯೋಗವನವನ್ನು ಲೋಕಾರ್ಪಣೆಗೊಳಿಸಿ, ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ನೂತನ ಸಭಾಭವನದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿ.ವಿ.ವಿ.ಸಂಘವು ಪಾರದರ್ಶಕ ಆಡಳಿತದೊಂದಿಗೆ ಮೂಲಭೂತ ಸೌಲಭ್ಯಗಳು ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ ಅವರ ಸಮರ್ಪಣಾ ಸೇವೆಯಿಂದಲೇ ಸಂಘವು ಈ ಎತ್ತರಕ್ಕೆ ಬೆಳೆದಿದೆ. ವಸುದೈವ ಕುಟುಂಬಕಂ ತತ್ವವು ಸಂಕುಚಿತ ಮನೋಭಾವ ತೊರೆದು, ಇಡೀ ಜಗತ್ತನ್ನೇ ತನ್ನವರೆಂದು ಭಾವಿಸಲು ಕಲಿಸುತ್ತದೆ. ಈ ಮೌಲ್ಯ ಭಾರತದಲ್ಲೇ ಹೆಚ್ಚಾಗಿ ಕಾಣಸಿಗುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಬಿ.ಎನ್. ನರಸಿಂಹಮೂರ್ತಿ, ಬಿ.ವಿ.ವಿ.ಎಸ್ ಒಂದು ಬೃಹತ್ ಶಿಕ್ಷಣ ಸೇವಾ ಸಂಸ್ಥೆಯಾಗಿದ್ದು, ನಿಸ್ವಾರ್ಥ ಸೇವೆಯ ಮೂಲಕ ಡಾ. ವೀರಣ್ಣ ಚರಂತಿಮಠರು ಕರ್ಮವೀರರಾಗಿ ಯಶಸ್ಸು ಗಳಿಸಿದ್ದಾರೆ ಎಂದು ತಿಳಿಸಿದರು.

ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಚಿತ್ರದುರ್ಗದ ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ ಮಾತನಾಡಿ, ಬಿ.ವಿ.ವಿ.ಸಂಘವು ದೇಶದ ಯಾವುದೇ ಶಿಕ್ಷಣ ಸಂಸ್ಥೆಗಿಂತ ಹಿಂದೆ ಇಲ್ಲ. ಪ್ರಗತಿಪರ ಆಲೋಚನೆಗಳೊಂದಿಗೆ ದೇಶದಲ್ಲಿರುವ ಬಹುತೇಕ ಎಲ್ಲ ಕೋರ್ಸ್‌ಗಳನ್ನು ಇಲ್ಲಿ ಕಲಿಸಲಾಗುತ್ತಿದೆ. ಸುಮಾರು 54 ಸಾವಿರ ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವುದು ಅದ್ಭುತ ಸಾಧನೆ ಎಂದು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಸದ್ಗುರು ಮಧುಸೂಧನಸಾಯಿ ಅವರಿಗೆ ಬಿ.ವಿ.ವಿ.ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸಂಘದ ಕಾರ್ಯಾಧ್ಯಕ್ಷರಾದ ಡಾ. ವೀರಣ್ಣ ಚರಂತಿಮಠ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಮಹೇಶ ಅಥಣಿ ವಂದಿಸಿದರು. ಮಹಾಂತೇಶ ಶೆಟ್ಟರ ಅತಿಥಿಗಳನ್ನು ಪರಿಚಯಿಸಿದರು. ಮಹಾವಿದ್ಯಾಲಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಸಾಸನೂರ, ಅಶೋಕ ಸಜ್ಜನ ಬೇವೂರ, ಗುರುಬಸವ ಸೂಳಿಬಾವಿ ಸೇರಿದಂತೆ ಸಂಘದ ಸದಸ್ಯರು, ಪ್ರಾಚಾರ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

🔖 #BVVS #ಪ್ರಕೃತಿಯೋಗವನ #VasudhaivaKutumbakam #SadguruMadhusudhanSai

#Bagalkot #EducationForValues #YogaAndNature #Petkarmedia

👉 ಇನ್ನಷ್ಟು ಸ್ಥಳೀಯ ಸುದ್ದಿಗಳಿಗಾಗಿ Petkarmedia ಫಾಲೋ ಮಾಡಿ

ಕಾಮೆಂಟ್‌ಗಳು