ಬಾಗಲಕೋಟೆ: ಮಾದಕ ವಸ್ತುಗಳ ಕಾಯ್ದೆ ಕುರಿತು ತನಿಖಾಧಿಕಾರಿಗಳಿಗೆ ಕಾರ್ಯಗಾರ



ಬಾಗಲಕೋಟೆ : ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ತನಿಖಾಧಿಕಾರಿಗಳು ಹಾಗೂ ತನಿಖಾ ಸಹಾಯಕರಿಗಾಗಿ ಮಾದಕ ವಸ್ತುಗಳ ಕಾಯ್ದೆ (ಎನ್‌ಡಿಪಿಎಸ್) ಕಾನೂನಿನ ಕುರಿತು ವಿಶೇಷ ಕಾರ್ಯಗಾರವನ್ನು ಆಯೋಜಿಸಲಾಯಿತು. 

ಬೆಂಗಳೂರು ಎನ್.ಸಿ.ಬಿ.ಯ ರಿಶಿಬ್ ಮಿಶ್ರಾ ಅವರು ಕಾರ್ಯಗಾರ ನಡೆಸಿ, ಮಾದಕ ವಸ್ತು ಪ್ರಕರಣಗಳ ತನಿಖೆಯಲ್ಲಿ ಅನುಸರಿಸಬೇಕಾದ ಕಾನೂನು ಕ್ರಮಗಳು, ಸಾಕ್ಷ್ಯ ಸಂಗ್ರಹಣೆ ಹಾಗೂ ನ್ಯಾಯಾಂಗ ಪ್ರಕ್ರಿಯೆಗಳ ಕುರಿತು ವಿವರವಾದ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಎನ್. ವಿಜಯ್, ಪೊಲೀಸ್ ಅಧೀಕ್ಷಕರಾದ ಶ್ರೀ ಸಿದ್ಧಾರ್ಥ ಗೋಯಲ್ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಪ್ರಸನ್ನ ದೇಸಾಯಿ ಐಪಿಎಸ್, ಡಿ.ಎಲ್.ಎಸ್.ಎ. ನ್ಯಾಯಾಧೀಶರಾದ ಶ್ರೀ ಚಂದ್ರಶೇಖರ, ಜಿಲ್ಲಾ ಪೊಲೀಸ್ ಕಾರ್ಯಾಲಯದ ಕಾನೂನು ಸಲಹಾ ಕೇಂದ್ರದ ನ್ಯಾಯವಾದಿ ಶ್ರೀಮತಿ ಮೇನಕಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಗಣ್ಯರು ತನಿಖಾಧಿಕಾರಿಗಳಿಗೆ ಪ್ರಸ್ತುತ ಕಾನೂನು ವಿಧಿಗಳು, ಪ್ರಕರಣ ದಾಖಲಿಸುವಲ್ಲಿ ಅಗತ್ಯ ಮುನ್ನೆಚ್ಚರಿಕೆಗಳು ಹಾಗೂ ಪರಿಣಾಮಕಾರಿ ತನಿಖೆಗೆ ಸಂಬಂಧಿಸಿದ ಸಲಹೆಗಳನ್ನು ನೀಡಿದರು. ಕಾರ್ಯಗಾರವು ತನಿಖಾಧಿಕಾರಿಗಳ ವೃತ್ತಿಪರ ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಕಾಮೆಂಟ್‌ಗಳು