ವಿಜಯಪುರ: ಬಿ.ಎಲ್.ಡಿ.ಇ ಹೆಲ್ತ್ ಕಾರ್ಡ್ ಮೂಲಕ ಪತ್ರಕರ್ತರಿಗೆ ಭದ್ರತೆ” : ಸುನೀಲಗೌಡ ಪಾಟೀಲ

ವಿಜಯಪುರ:ಇಂದಿನ ಒತ್ತಡದ ಜೀವನದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಹೆಚ್ಚುವರಿ ಸಂಪತ್ತು ಗಳಿಸಿದಂತೆಯೇ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದರು.

Petkarmedia:ಬಾಗಲಕೋಟೆ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಬಿ.ಎಲ್.ಡಿ.ಇ ಆರೋಗ್ಯ ಯೋಜನೆಯ ಕುಟುಂಬ ಆರೋಗ್ಯ ಹೆಲ್ತ್ ಕಾರ್ಡ್ ವಿತರಿಸಲಾಯಿತು.

ಸೋಮವಾರ ನಗರದಲ್ಲಿರುವ ಬಿ.ಎಲ್.ಡಿ.ಇ ಟ್ರಾಮಾ ಸೆಂಟರ್‌ನ ಮಿನಿ ಆಡಿಟೋರಿಯಂನಲ್ಲಿ ಬಾಗಲಕೋಟೆ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಬಿ.ಎಲ್.ಡಿ.ಇ ಆರೋಗ್ಯ ಯೋಜನೆಯ ಕುಟುಂಬ ಆರೋಗ್ಯ ಹೆಲ್ತ್ ಕಾರ್ಡ್ ವಿತರಿಸಿ ಅವರು ಮಾತನಾಡಿದರು.

“ಆರೋಗ್ಯವೇ ಭಾಗ್ಯ ಎನ್ನುವುದು ಹಳೆಯ ಮಾತು. ಇಂದಿನ ದಿನಗಳಲ್ಲಿ ಉತ್ತಮ ಆರೋಗ್ಯ ಹೊಂದಿರುವುದೇ ನಿಜವಾದ ಐಶ್ವರ್ಯವಾಗಿದೆ. ಯಾವುದೇ ಆರೋಗ್ಯ ಸಮಸ್ಯೆ ಎದುರಾಗದೆ, ಪರಾವಲಂಬಿಯಾಗದೇ ಸ್ವಾವಲಂಬಿಯಾಗಿ ಬದುಕುವುದು ಅಗತ್ಯ” ಎಂದು ಅವರು ಹೇಳಿದರು.

ನಗರ ಆರೋಗ್ಯ ಕೇಂದ್ರದಲ್ಲಿ ಒಂದೇ ಸೂರಿನಡಿ ಆಯುರ್ವೇದ ಹಾಗೂ ಅಲೋಪಥಿ ಚಿಕಿತ್ಸಾ ಸೌಲಭ್ಯಗಳು ಲಭ್ಯವಿವೆ. ಮುಂಬರುವ ದಿನಗಳಲ್ಲಿ ಜಮಖಂಡಿಯಲ್ಲಿ ಹೊಸ ಆಯುರ್ವೇದ ಕಾಲೇಜು ಹಾಗೂ ನಗರ ಆರೋಗ್ಯ ಕೇಂದ್ರ ಆರಂಭಿಸುವ ಚಿಂತನೆಯೂ ಇದೆ ಎಂದು ತಿಳಿಸಿದರು.

ಪತ್ರಕರ್ತರೊಂದಿಗೆ ತಮ್ಮ ಕುಟುಂಬದ ಕಾಲದಿಂದಲೂ ಉತ್ತಮ ಬಾಂಧವ್ಯವಿದ್ದು, ಈ ಹೆಲ್ತ್ ಕಾರ್ಡ್ ಮೂಲಕ ಮಾಧ್ಯಮ ಪ್ರತಿನಿಧಿಗಳು ಮತ್ತು ಅವರ ಕುಟುಂಬದವರಿಗೆ ಉತ್ತಮ ಚಿಕಿತ್ಸೆ ಲಭ್ಯವಾಗಲಿದೆ ಎಂದು ಹೇಳಿದರು.

ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ.ಎಂ. ಜಯರಾಜ ಅವರು ಕಳೆದ 75 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದು, ತಾಯಿ–ಮಗು ಮರಣ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದರು.

ಕುಲಪತಿ ಡಾ. ಅರುಣ ಚಂ. ಇನಾಮದಾರ ಮಾತನಾಡಿ, ಅಂಗಾಂಗ ದಾನದಿಂದ ಅನೇಕ ಜೀವಗಳಿಗೆ ಹೊಸ ಬೆಳಕು ನೀಡಬಹುದು. ಜನರು ದೇಹದಾನ ಮತ್ತು ಅಂಗಾಂಗ ದಾನದ ಬಗ್ಗೆ ಜಾಗೃತರಾಗಬೇಕು ಎಂದು ಕರೆ ನೀಡಿದರು.

ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯೆ ಡಾ. ತೇಜಶ್ವಿನಿ ವಲ್ಲಭ ಅವರು, ಆಸ್ಪತ್ರೆಯಲ್ಲಿ ಉಚಿತ ಹೆರಿಗೆ, ಉಚಿತ ಸಣ್ಣ ಶಸ್ತ್ರಚಿಕಿತ್ಸೆಗಳು ಹಾಗೂ ವಿವಿಧ ಆರೋಗ್ಯ ವಿಮಾ ಸೌಲಭ್ಯಗಳಿವೆ ಎಂದು ಮಾಹಿತಿ ನೀಡಿದರು.

ಬಾಗಲಕೋಟೆ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಅಂಗಡಿ ಮಾತನಾಡಿ, ಹೆಲ್ತ್ ಕಾರ್ಡ್ ಭರವಸೆಯನ್ನು ಕಾರ್ಯರೂಪಕ್ಕೆ ತಂದ ಶಾಸಕ ಸುನೀಲಗೌಡ ಪಾಟೀಲರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದ ಬಳಿಕ ಸುಮಾರು 100ಕ್ಕೂ ಹೆಚ್ಚು ಪತ್ರಕರ್ತರು ಬಿ.ಎಲ್.ಡಿ.ಇ ಎ.ವಿ.ಎಸ್ ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರಕ್ಕೆ ಭೇಟಿ ನೀಡಿ ಸೌಲಭ್ಯಗಳನ್ನು ವೀಕ್ಷಿಸಿದರು.

🔖

#BLDEHealthCard #SunilGoudaPatil

#JournalistsWelfare#HealthIsWealth

#VijayapuraNews#BagalkotMedia

#AyurvedaAndAllopathy# HealthcareForJournalists

ಕಾಮೆಂಟ್‌ಗಳು