ಬಾಗಲಕೋಟೆ:ಹವೇಲಿ ರಸ್ತೆಗಳ ದುರಸ್ತಿ ವಿಳಂಬ: ಪೌರಾಯುಕ್ತರಿಗೆ ನಿವಾಸಿಗಳ ತುರ್ತು ಮನವಿ

ಬಾಗಲಕೋಟೆ:ನಗರದ ವಾರ್ಡು ನಂ.11ರ ಹವೇಲಿ ಸಂಪರ್ಕಿಸುವ ಪ್ರಮುಖ ರಸ್ತೆ ಮಾರ್ಗವಾದ ಕೆ.ಇ.ಬಿ. ಕ್ರಾಸ್‌ನಿಂದ ಹವೇಲಿಯವರೆಗೆ ಹಾಗೂ ಹವೇಲಿಯ ಒಳರಸ್ತೆಗಳು ಕಳೆದ ನಾಲ್ಕು ವರ್ಷಗಳಿಂದ ದುರಸ್ತಿಯಾಗದೆ ಶೋಚನೀಯ ಸ್ಥಿತಿಯಲ್ಲಿದ್ದು, ತಕ್ಷಣ ರಸ್ತೆ ದುರಸ್ತಿ ಅಥವಾ ಹೊಸ ಡಾಂಬರೀಕರಣ ಕಾಮಗಾರಿ ಕೈಗೊಳ್ಳಬೇಕೆಂದು ಹವೇಲಿ ನಿವಾಸಿಗಳು ನಗರಸಭೆ ಪೌರಾಯುಕ್ತರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

Petkarmedia:ತಕ್ಷಣ ರಸ್ತೆ ದುರಸ್ತಿ  ಕಾಮಗಾರಿ ಕೈಗೊಳ್ಳಬೇಕೆಂದು ಹವೇಲಿ ನಿವಾಸಿಗಳು ನಗರಸಭೆ ಪೌರಾಯುಕ್ತರಿಗೆ ಲಿಖಿತ ಮನವಿ ಸಲ್ಲಿಸಿದ್ದಾರೆ.

ಮನವಿಯಲ್ಲಿ ತಿಳಿಸಿರುವಂತೆ, ವಾರ್ಡು ನಂ.11 ಹವೇಲಿಗೆ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ತಗ್ಗು–ದಿನ್ನೆಗಳು ಉಂಟಾಗಿ ಅನೇಕ ಲಘು ಅಪಘಾತಗಳು ಸಂಭವಿಸಿದ್ದು, ನಾಗರಿಕರು ದೈಹಿಕ ತೊಂದರೆಗೆ ಒಳಗಾಗುತ್ತಿದ್ದಾರೆ. ಕಾಲಕಾಲಕ್ಕೆ ರಿಪೇರಿ ಕೈಗೊಳ್ಳದ ಕಾರಣ ಡಾಂಬರ ರಸ್ತೆಗಳು ಮಣ್ಣಿನ ರಸ್ತೆಗಳಾಗಿ ಮಾರ್ಪಟ್ಟಿವೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಹವೇಲಿಗೆ ದೈನಂದಿನ ಸಂಚಾರ ಮಾಡುವ ಸಾರ್ವಜನಿಕರು, ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು, ಶಾಲಾ ವಾಹನಗಳು ಮತ್ತು ಹವೇಲಿಯಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದ ತರಬೇತಿ ಕೇಂದ್ರದ ವಿದ್ಯಾರ್ಥಿಗಳ ಬಸ್ಸುಗಳು ಸಹ ಈ ರಸ್ತೆಗಳಲ್ಲಿ ಸಂಚರಿಸಲು ತೀವ್ರ ತೊಂದರೆ ಅನುಭವಿಸುತ್ತಿವೆ. ಕೆಲವೊಮ್ಮೆ ವಾಹನಗಳು ತಗ್ಗುಗಳಲ್ಲಿ ಸಿಲುಕಿ ನಿಂತು ಸಂಚಾರ ಅಸ್ತವ್ಯಸ್ತವಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಆದ್ದರಿಂದ ಕೆ.ಇ.ಬಿ. ಕ್ರಾಸ್‌ನಿಂದ ಹವೇಲಿಯವರೆಗೆ ಇರುವ ರಸ್ತೆ ಹಾಗೂ ಹವೇಲಿಯ ಒಳರಸ್ತೆಗಳನ್ನು ತುರ್ತಾಗಿ ದುರಸ್ತಿ ಮಾಡಲಿ ಅಥವಾ ಡಾಂಬರೀಕರಣ ಕಾಮಗಾರಿ ಕೈಗೊಳ್ಳುವ ಮೂಲಕ ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂದು ನಿವಾಸಿಗಳು ಪೌರಾಯುಕ್ತರನ್ನು ಒತ್ತಾಯಿಸಿದ್ದಾರೆ.

ಒಂದು ವಾರದೊಳಗೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ನಗರಸಭೆ ಕಚೇರಿ ಆವರಣದಲ್ಲಿ ಬೇಡಿಕೆ ಈಡೇರುವವರೆಗೆ ಉಪಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ವಾರ್ಡು ನಂ.11 ಹವೇಲಿ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.


#Bagalkot#ಹವೇಲಿ#Ward11#ಹವೇಲಿ ರಸ್ತೆ#RoadRepair#BadRoads#UrbanIssues#ನಗರಸಭೆ#Municipality#PublicDemand#CivicIssues#ಜನಹಿತ#ResidentsVoic#ProtestWarning#Upasatyagraha

ಕಾಮೆಂಟ್‌ಗಳು