ಸ್ವದೇಶಿ ಬಳಸಿ ದೇಶ ಉಳಿಸಿ : ಮಾಜಿ ಸೇನಾಧಿಕಾರಿಗಳ ಜಾಗೃತಿ ಅಭಿಯಾನ

ಬಾಗಲಕೋಟೆ: ದೇಶಕ್ಕೆ ನಿಷ್ಠಾವಂತವಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ಮಾಜಿ ಸೇನಾಧಿಕಾರಿಗಳು, ಸ್ವದೇಶಿ ಬಳಸಿ ದೇಶ ಉಳಿಸಿ ಎಂಬ ಘೋಷಣೆಯೊಂದಿಗೆ ಇಡೀ ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ವಿಶೇಷ ಅಭಿಯಾನವು ಇಂದು ಬಾಗಲಕೋಟೆ ನಗರದ ವಿದ್ಯಾಗಿರಿಯ ಪ್ರದೇಶದಲ್ಲಿ ನಡೆಯಿತು.

Petkarmedia:  ಹಿರಿಯ ಮಾಜಿ ಸೇನಾಧಿಕಾರಿಗಳು, ಸ್ವದೇಶಿ ಬಳಸಿ ದೇಶ ಉಳಿಸಿ ಎಂಬ ಘೋಷಣೆಯೊಂದಿಗೆ  ವಿಶೇಷ ಅಭಿಯಾನವು ಇಂದು ಬಾಗಲಕೋಟೆ ನಗರದ ವಿದ್ಯಾಗಿರಿಯ ಪ್ರದೇಶದಲ್ಲಿ ನಡೆಯಿತು.

ಹಿರಿಯ ಮಾಜಿ ಸೈನಿಕರು ಸೈಕಲ್ ಸವಾರಿ ಮೂಲಕ ಅಭಿಯಾನ ನಡೆಸಿ, ವಿದೇಶಿ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡಿ, ದೇಶೀಯ ಉತ್ಪನ್ನಗಳನ್ನು ಬಳಸಿ ರಾಷ್ಟ್ರದ ಆರ್ಥಿಕ ಬಲವರ್ಧನೆಗೆ ಕೈಜೋಡಿಸಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು. ಸ್ವದೇಶಿ ಉತ್ಪನ್ನಗಳ ಬಳಕೆಯಿಂದ ದೇಶದ ಕೈಗಾರಿಕೆಗಳಿಗೆ ಉತ್ತೇಜನ ದೊರೆಯುವುದರೊಂದಿಗೆ ಯುವಜನತೆಗೆ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ ಎಂದು ಅವರು ತಿಳಿಸಿದರು.

ಈ ಜಾಗೃತಿ ಸೈಕಲ್ ಸವಾರಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಾಂತಗೌಡ ಪಾಟೀಲ್, ಪಕ್ಷದ ಮುಖಂಡ ಬಸವರಾಜ ಯಂಕಂಚಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. ಮಾರ್ಗಮಧ್ಯೆ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಯುವಕರು ಅಭಿಯಾನಕ್ಕೆ ಸ್ಪಂದಿಸಿ ಬೆಂಬಲ ವ್ಯಕ್ತಪಡಿಸಿದರು.

ದೇಶಭಕ್ತಿ, ಸ್ವಾವಲಂಬನೆ ಮತ್ತು ಆರ್ಥಿಕ ರಾಷ್ಟ್ರವಾದದ ಸಂದೇಶವನ್ನು ಸಾರುವ ಈ ಅಭಿಯಾನವು ಜನರಲ್ಲಿ ಚೈತನ್ಯ ಮೂಡಿಸಿತು.


Petkarmedia:  ಸ್ಥಳೀಯ ಸುದ್ದಿಗಾಗಿ ನೋಡಿ

ಕಾಮೆಂಟ್‌ಗಳು