ಬಾಗಲಕೋಟೆ ನವನರದ ನವನಗರ ಸೆಕ್ಟರ್–15ರಲ್ಲಿ ಬೀದಿ ನಾಯಿಗಳ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಾಲಕಿ ಅಲೈನಾ ಲೋಕಾಪುರ್ ಸಾವಿಗೆ ಜಿಲ್ಲಾಡಳಿತ ಹಾಗೂ ನಗರಸಭೆಯ ನಿರ್ಲಕ್ಷ್ಯವೇ ನೇರ ಕಾರಣ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬಾಗಲಕೋಟೆ ಘಟಕ ತೀವ್ರವಾಗಿ ಖಂಡಿಸಿದೆ.
Petkarmedia: ನಾಯಿ ಕಡಿತಕ್ಕೆ ಒಳಗಾಗಿ ಮೃತಪಟ್ಟ ಬಾಲಕಿ ಕುಟುಂಬಕ್ಕೆ ಸಾಂತ್ವನ ಹೇಳಿದ SDPI.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ SDPI ನಿಯೋಗ, ಸುಪ್ರೀಂ ಕೋರ್ಟ್‌ನ ಇತ್ತೀಚಿನ ನಿರ್ದೇಶನಗಳ ಅನ್ವಯ ಸಂತ್ರಸ್ತ ಕುಟುಂಬಕ್ಕೆ ತಕ್ಷಣ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ದಾಳಿಯಿಂದ ಸಂಭವಿಸುವ ಸಾವು–ನೋವುಗಳಿಗೆ ಸ್ಥಳೀಯ ಆಡಳಿತವೇ ನೇರ ಹೊಣೆಗಾರಿಕೆ ವಹಿಸಬೇಕು ಎಂಬುದು ಸುಪ್ರೀಂ ಕೋರ್ಟ್ ತೀರ್ಪಿನ ಉದ್ದೇಶವಾಗಿದ್ದು, ಸಂವಿಧಾನದ ವಿಧಿ 21ರ ಪ್ರಕಾರ ನಾಗರಿಕರ ಜೀವ ರಕ್ಷಿಸುವುದು ಸರ್ಕಾರದ ಮೂಲ ಕರ್ತವ್ಯ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ವಿವಿಧ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಪೀಠಗಳ ನಿರ್ದೇಶನದಂತೆ ಮೃತ ಬಾಲಕಿಯ ಕುಟುಂಬಕ್ಕೆ ಕನಿಷ್ಠ ₹10 ರಿಂದ ₹20 ಲಕ್ಷ ರೂ.ಗಳ ತಕ್ಷಣದ ಪರಿಹಾರ ನೀಡಬೇಕು ಎಂದು SDPI ಆಗ್ರಹಿಸಿದೆ. ಜೊತೆಗೆ ಬೀದಿ ನಾಯಿಗಳ ಹಾವಳಿ ನಿಯಂತ್ರಣದಲ್ಲಿ ವಿಫಲರಾಗಿರುವ ಹಾಗೂ 2026ರ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಪಾಲಿಸದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಜಿಲ್ಲೆಯಲ್ಲಿ ‘ಆನಿಮಲ್ ಬರ್ತ್ ಕಂಟ್ರೋಲ್ (ABC) ರೂಲ್ಸ್–2023’ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಜನನಿಬಿಡ ಪ್ರದೇಶಗಳಿಂದ ಅಪಾಯಕಾರಿ ಬೀದಿ ನಾಯಿಗಳನ್ನು ತಕ್ಷಣ ಸ್ಥಳಾಂತರಿಸಬೇಕು ಎಂದು SDPI ತಿಳಿಸಿದೆ.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ SDPI ರಾಜ್ಯ ಕಾರ್ಯದರ್ಶಿ ರಮಜಾನ್ ಕಡಿವಾಲ, “ಒಂದು ಬಡ ಕುಟುಂಬದ ಮಗು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಬಲಿಯಾಗಿರುವುದು ಇಡೀ ಜಿಲ್ಲೆಗೆ ಅವಮಾನಕರ ಸಂಗತಿ. ಕೇವಲ ಸಾಂತ್ವನ ಹೇಳುವುದರಿಂದ ಕುಟುಂಬದ ನೋವು ನೀಗದು. ಜಿಲ್ಲಾಡಳಿತವು ಲಿಖಿತ ಭರವಸೆ ನೀಡಬೇಕು ಹಾಗೂ ನ್ಯಾಯಯುತ ಪರಿಹಾರ ಒದಗಿಸಬೇಕು. ಇಲ್ಲದಿದ್ದರೆ ಸಂತ್ರಸ್ತ ಕುಟುಂಬದ ಪರವಾಗಿ ಕಾನೂನು ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಈ ವೇಳೆ SDPI ವಿಧಾನಸಭಾ ಅಧ್ಯಕ್ಷ ಖಾಸಿಂ ಗೊಳಸಂಗಿ, ಕಾರ್ಯದರ್ಶಿ ಸದಾಂ ಮುಲ್ಲಾ, ಮುಖಂಡರಾದ ಮೆಹಬೂಬ ಹಡಗಲಿ, ಅಲ್ತಾಫ್ ಮದರಿ, ಇನಾಯತ್ ಗಲಗಲಿ, ಅರ್ಷದ ಬಾದಾಮಿ, ಸಾದಿಕ್ ಕಾಂಟ್ರಾಕ್ಟರ್ ಸೇರಿದಂತೆ ಪಕ್ಷದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
#ಬೀದಿ_ನಾಯಿ_ದಾಳಿ
#ಬಾಲಕಿ_ಬಲಿ
#ಬಾಗಲಕೋಟೆ
#ನವನಗರ
#ನ್ಯಾಯ_ಬೇಕು
#ಜಿಲ್ಲಾಡಳಿತದ_ನಿರ್ಲಕ್ಷ್ಯ
#SDPI
#StreetDogMenace
#JusticeForAlaina
#PublicSafety
#AnimalControl
#ABC_Rules_2023
#RightToLife
#SaveOurChildren
#BagalkotNews

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ