ಬೀಳಗಿ:ರಾತ್ರಿ ಮೇಕೆಗಳ ಮೇಲೆ ಬೀದಿ ನಾಯಿಗಳ ದಾಳಿ – 20 ಮೇಕೆಗಳ ಸಾವು, 3ಕ್ಕೆ ಗಾಯ

ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲ್ಲೂಕಿನ ಗೋವಿನದಿನ್ನಿ ಪುನರ್ವಸತಿ ಕೇಂದ್ರದಲ್ಲಿ ಬೀದಿ ನಾಯಿಗಳ ದಾಳಿಯಿಂದ 20 ಮೇಕೆಗಳು ಸಾವನ್ನಪ್ಪಿ, ಇನ್ನೂ 3 ಮೇಕೆಗಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.


ಬಸವರಾಜ ಬುಗುಡಿ ಅವರಿಗೆ ಸೇರಿದ ಮೇಕೆಗಳನ್ನು ಮನೆ ಎದುರು ದಡ್ಡಿ ನಿರ್ಮಿಸಿ ಕಟ್ಟಲಾಗಿತ್ತು. ಆದರೆ ರಾತ್ರಿ ವೇಳೆ ಬಂದ ಡೆಡ್ಲಿ ಬೀದಿ ನಾಯಿಗಳು ಮೇಕೆಗಳ ಮೇಲೆ ದಾಳಿ ನಡೆಸಿ, ಹೊಟ್ಟೆ ಮತ್ತು ತಲೆ ಭಾಗಗಳನ್ನು ಹರಿದು ತಿಂದಿವೆ. ಮರಿ ಮೇಕೆಗಳೂ ಸೇರಿ ಒಟ್ಟು 20 ಮೇಕೆಗಳು ಸ್ಥಳದಲ್ಲೇ ಮೃತಪಟ್ಟಿವೆ.

ಘಟನೆಯ ಮಾಹಿತಿ ತಿಳಿದು ಬೀಳಗಿ ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಮೇಕೆಗಳ ಮೌಲ್ಯ ಅಂದಾಜು ಸುಮಾರು ಮೂರು ಲಕ್ಷ ರೂಪಾಯಿ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ನಷ್ಟಕ್ಕೊಳಗಾದ ರೈತ ಬಸವರಾಜ ಬುಗುಡಿ ಅವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳು