ಬಾಗಲಕೋಟೆ: ಹೆಮ್ಮೆಯ ಪ್ರಧಾನಮಂತ್ರಿ Narendra Modi ಅವರ ಸಮರ್ಥ ನಾಯಕತ್ವದಲ್ಲಿ, ಮಾನ್ಯ ಕೇಂದ್ರ ಹಣಕಾಸು ಸಚಿವೆ Nirmala Sitharaman ರವರು ಲೋಕಸಭೆಯಲ್ಲಿ ಇಂದು ಮಂಡಿಸಿದ 2026–27ನೇ ಸಾಲಿನ ಕೇಂದ್ರ ಬಜೆಟ್‌ನ ನೇರ ಪ್ರಸಾರವನ್ನು ಬಾಗಲಕೋಟೆ ವಿಧಾನ ಪರಿಷತ್ ಶಾಸಕರಾದ ಪಿ. ಎಚ್. ಪೂಜಾರ ಅವರ ಜನ ಸಂಪರ್ಕ ಕಾರ್ಯಾಲಯದಲ್ಲಿ ಪ್ರಮುಖರು ಹಾಗೂ ಕಾರ್ಯಕರ್ತರೊಂದಿಗೆ ವೀಕ್ಷಿಸಲಾಯಿತು.
ನಂತರ ಮಾತನಾಡಿದ ಶಾಸಕರಾದ ಪಿ. ಎಚ್. ಪೂಜಾರ ಅವರು, ಈ ಬಜೆಟ್ ರೈತರು, ಕಾರ್ಮಿಕರು, ಮಧ್ಯಮ ವರ್ಗ, ಯುವಜನತೆ ಹಾಗೂ ಮಹಿಳೆಯರ ಆಶಯಗಳನ್ನು ಪೂರೈಸುವಂತಹ ಜನಪರ ಬಜೆಟ್ ಆಗಿದ್ದು, ದೇಶದ ಸಮಗ್ರ ಅಭಿವೃದ್ಧಿಗೆ ದಿಕ್ಕು ನೀಡುವ ಬಜೆಟ್ ಎಂದು ಶ್ಲಾಘಿಸಿದರು. ಮೂಲಸೌಕರ್ಯ, ಉದ್ಯೋಗ ಸೃಷ್ಟಿ, ಕೈಗಾರಿಕೆ, ಕೃಷಿ ಹಾಗೂ ಸಾಮಾಜಿಕ ವಲಯಗಳಿಗೆ ಹೆಚ್ಚಿನ ಒತ್ತು ನೀಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರಾದ ಸಂಗಣ್ಣಗೌಡ ಗೌಡರ, ಕಳಕಪ್ಪ ಬಾದವಡಗಿ, ವಿರುಪಾಕ್ಷ ಅಮೃತಕರ್, ಶಂಭುಗೌಡ ಪಾಟೀಲ, ವೀರಣ್ಣ ಹಳೆಗೌಡರ, ಯಲ್ಲಪ್ಪ ಅಂಬಿಗೇರ, ರಾಘವೇಂದ್ರ ನಾಗೂರ, ಸಂಜೀವ ಡಿಗ್ಗಿ, ಡಾ. ವಿರೇಶ ಹಿರೇಮಠ, ಡಾ. ಕ್ರೀಷ್ಣಾ ಚೌಧರಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ