ಸಂಕ್ಲಾಪುರದಲ್ಲಿ ಜೀತ ಪದ್ಧತಿ ಬಯಲು – ಒಡಿಶಾ ಮೂಲದ 24 ಕಾರ್ಮಿಕರ ರಕ್ಷಣೆ

ಬಾಗಲಕೋಟೆ: ಜಿಲ್ಲೆಯ ಸಂಕ್ಲಾಪುರ ಗ್ರಾಮದಲ್ಲಿರುವ ಇಟ್ಟಿಗೆ ಬಟ್ಟಿಯಲ್ಲಿ ಜೀತ ಪದ್ಧತಿಯಲ್ಲಿ ದುಡಿಸಿಕೊಳ್ಳಲಾಗುತ್ತಿದ್ದ ಒಡಿಶಾ ಮೂಲದ 24 ಕಾರ್ಮಿಕರನ್ನು ಅಧಿಕಾರಿಗಳು ರಕ್ಷಿಸಿದ್ದಾರೆ.

ಮಾಹಿತಿ ದೊರಕುತ್ತಿದ್ದಂತೆಯೇ ಇಳಕಲ್ ತಹಶೀಲ್ದಾರ್ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಾರೆ. ಇಟ್ಟಿಗೆ ಬಟ್ಟಿಯ ಮಾಲೀಕ ಈರಪ್ಪ ಕುಂಬಾರ ವಿರುದ್ಧ ಬಾಲಕಾರ್ಮಿಕ ನಿಷೇಧ ಕಾಯ್ದೆ ಹಾಗೂ ಜೀತ ಪದ್ಧತಿ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ರಕ್ಷಿಸಲ್ಪಟ್ಟ ಕಾರ್ಮಿಕರನ್ನು ನಂತರ ಅವರ ಸ್ವರಾಜ್ಯ ಒಡಿಶಾಗೆ ವಾಪಸ್ ಕಳುಹಿಸಲಾಗಿದೆ.

ಕಾಮೆಂಟ್‌ಗಳು