ಬಾದಾಮಿ:ಬೆಳೆಹಾನಿ ಮಾಡಿದವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮಕ್ಕೆ ಆಗ್ರಹ

ಬಾದಾಮಿ: ತಾಲೂಕಿನ ಡಾಣಕಶಿರೂರ ಗ್ರಾಮದಲ್ಲಿನ ಜಮೀನು ಸರ್ವೇ ನಂಬರ 41/3 ರಲ್ಲಿ ಶೀವಲೀಲಾ ಬಸವಪ್ರಭು ಕುಂದಗೋಳ ಇವರ  ಸಂಬಂದಿಕರು ಬೆಳೆದ ಬೆಳೆಯನ್ನು ಹಾನಿ ಮಾಡಿದ್ದು, ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರದ ನಿವಾಸಿ ಜಮೀನು ಮಾಲೀಕೆ ಗಿರಿಜಾ ಕುಂದಗೋಳ ಆಗ್ರಹಿಸಿದ್ದಾರೆ.

 

ಈ ಕುರಿತು  ಪ್ರಕಟಣೆ ನೀಡಿರುವ ಅವರು ಸದರಿ ಪ್ರಕರಣ ನ್ಯಾಯಾಲಯದ ವಿಚಾರಣೆಯಲ್ಲಿದ್ದು,  ಕಷ್ಟಪಟ್ಟು ಉಳುಮೆ ಮಾಡಿದ ಕಬ್ಬು ಮತ್ತು ಶೇಂಗಾ ಬೆಳೆಯನ್ನು ಟ್ರಾಕ್ಟರ್ ತೆಗೆದುಕೊಂಡು ಬಂದು ಹಾನಿ ಮಾಡಿರುತ್ತಾರೆ. ಈ ಕುರಿತು ಪ್ರಕರಣ ದಾಖಲಿಸಲು ಠಾಣೆಗೆ ಹೋದರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಶಿವಲೀಲಾ ಮತ್ತು ಈರಣ್ಣ ಇವರಿಬ್ಬರೂ ಹೊಲದಲ್ಲಿರುವ ಬೆಳೆಯನ್ನು ಹಾಳು ಮಾಡಿರುತ್ತಾರೆ. ಇದರಿಂದ ಕುಂದಗೋಳ ಕುಟುಂಬಕ್ಕೆ ಅಂದಾಜು ರೂ. 7 ಲಕ್ಷ ರೂಪಾಯಿಗಳ ಮೌಲ್ಯದ ಬೆಳೆ ಹಾನಿ ಸಂಭವಿಸಿರುತ್ತದೆ. ಸದರಿಯವರಿಗೆ ಗ್ರಾಮದ ಸುತ್ತಮುತ್ತಲಿನ ಜನರು, ಹೊಲದಲ್ಲಿ ಬೆಳೆಯನ್ನು ಹಾನಿ ಮಾಡಬಾರದು. ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಮಾತನಾಡಿ ಬಗೆಹರಿಸಿಕೊಳ್ಳಿ ಅಂತಾ ತಿಳಿಹೇಳಿದರೂ ಕೇಳದೆ ಹೇಳಲು ಹೋದವರಿಗೆ ಬೆದರಿಕೆ ಹಾಕಿ ಜಮೀನಿನಲ್ಲಿ ಬೆಳೆಯನ್ನು ಸಂಪೂರ್ಣವಾಗಿ ಹಾನಿ ಮಾಡಿರುತ್ತಾರೆ. ಇಷ್ಟೇಲ್ಲಾ ಘಟನೆ ಆದರೂ ಕೂಡಾ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನಿಡದೇ ನೀರ್ಲಕ್ಷತನವನ್ನು ತೋರಿರುವದು ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿರುತ್ತದೆ. ಕೂಡಲೇ ಹಾನಿ ಮಾಡಿದವರ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಗಿರಿಜಾ ಕುಂದಗೋಳ ಪೋಲಿಸ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.‌

ಕಾಮೆಂಟ್‌ಗಳು