ಬಾಗಲಕೋಟೆ:ಟೀಕಿನಮಠದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವ

ಬಾಗಲಕೋಟೆ:ವಿಧಾನ ಪರಿಷತ್ ಶಾಸಕರಾದ ಪಿ.ಎಚ್. ಪೂಜಾರ ಅವರ ನೇತೃತ್ವದಲ್ಲಿ ಟೀಕಿನಮಠದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ನಿರಂಜನ ಪಟ್ಟಾಧಿಕಾರ ಮಹೋತ್ಸವವು ಭಕ್ತಿಭಾವದಿಂದ ಭವ್ಯವಾಗಿ ನೆರವೇರಿತು. ಈ ಪವಿತ್ರ ಸಂದರ್ಭದಲ್ಲಿಂದು ಪೂಜ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.


ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರ ದೊಡ್ಡ ಸಮೂಹ ಭಾಗವಹಿಸಿ ದೇವರ ಆಶೀರ್ವಾದ ಪಡೆದುಕೊಂಡರು. ಶಾಸಕರಾದ ಪೂಜಾರ ಅವರು ಮಾತನಾಡಿ, ಇಂತಹ ಧಾರ್ಮಿಕ ಉತ್ಸವಗಳು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸುತ್ತವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರವಿ ಕುಮಟಗಿ, ಶಂಭುಗೌಡ ಪಾಟೀಲ, ಸಂಗಣ್ಣಗೌಡ ಗೌಡರ, ಡಾ. ಶೇಖರ ಮಾನೆ, ವಿರುಪಾಕ್ಷ ಅಮೃತಕರ, ಚಂದ್ರಕಾಂತ ಕೇಸನೂರ, ಕುಮಾರ ಗಿರಿಜಾ, ರಾಘು ನಾಗೂರ, ಯಲ್ಲಪ್ಪ ಅಂಬಿಗೇರ, ಸಂಜೀವ ಡಿಗ್ಗಿ, ಭೀಮನಗೌಡ ಗೌಡರ, ಶೈಲು ಅಂಗಡಿ, ರಾಜು ಗೌಳಿ, ಬಸವರಾಜ ಕಳಸಾ, ಗುರುಬಸಯ್ಯ ಪೂಜಾರಿ, ಗಣೀಶ ದುದ್ದಾಣಿ, ಮಂಜುನಾಥ ಬಳೂರಗಿ, ರಾಜು ಲಮಾಣಿ, ಮಂಜುನಾಥ ಚವ್ಹಾಣ, ಬಸವರಾಜ ಹೊಸಮನಿ ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.

ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ಆಶೀರ್ವಚನ ಕಾರ್ಯಕ್ರಮಗಳು ನಡೆದವು. ದೇವಸ್ಥಾನ ಪ್ರದೇಶ ಭಕ್ತರ ಸಂಭ್ರಮದಿಂದ ಕಂಗೊಳಿಸಿತು.

ಕಾಮೆಂಟ್‌ಗಳು