ಹುನಗುಂದ:ನೆಟ್ವರ್ಕ್ ‘ನೋ ಸರ್ವಿಸ್’ ಬಳಿಕ ಸಿಮ್ ಬದಲಿಸಿದ ರೈತನ ಖಾತೆಯಿಂದ ಲಕ್ಷಾಂತರ ರೂ. ಆನ್‌ಲೈನ್ ದೋಚಿದ ಖದೀಮರು

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಾವರಗಿ ಗ್ರಾಮದಲ್ಲಿ ಸಿಮ್ ಸ್ವಾಪ್ ಮೂಲಕ ಆನ್‌ಲೈನ್ ಮೋಸದ ಘಟನೆ ನಡೆದಿದೆ.

ನೆಟ್ವರ್ಕ್ ‘ನೋ ಸರ್ವಿಸ್’ ಸಮಸ್ಯೆ ಕಂಡು ರೈತ ಶರಣಪ್ಪ ಸಂಗಪ್ಪ ಗಾಳಿ ಅವರು ಡುಪ್ಲಿಕೇಟ್ ಸಿಮ್ ಪಡೆದ ಬಳಿಕ, ಅವರ ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು ₹1,83,999 ಹಣವನ್ನು ಖದೀಮರು ದೋಚಿದ್ದಾರೆ.

ಗ್ರಾಮೀಣ ಬ್ಯಾಂಕ್‌ನಿಂದ ₹99,999 ಹಾಗೂ ಸ್ಟೇಟ್ ಬ್ಯಾಂಕ್‌ನಿಂದ ₹84,000 ಹಂತ ಹಂತವಾಗಿ ವರ್ಗಾವಣೆಗೊಂಡಿದ್ದು, ಎಂ.ಡಿ. ರಶೀದ್ ಖಾನ್ ಎಂಬ ವ್ಯಕ್ತಿಗೆ ಹಣ ಹೋಗಿರುವುದು ಪತ್ತೆಯಾಗಿದೆ.

ರೈತರು 1930 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿ, ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ಸಿಮ್ ಸ್ವಾಪ್ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಮೋಸಗಳ ಬಗ್ಗೆ ಎಚ್ಚರಿಕೆಯಿಂದಿರಲು ಪೊಲೀಸರು ಮನವಿ ಮಾಡಿದ್ದಾರೆ.

ಕಾಮೆಂಟ್‌ಗಳು