ಬಾಗಲಕೋಟೆ: ಲಕ್ಷ್ಮೀನಾರಾಯಣ ಎನ್ನುವ ರೌಡಿ ಶೀಟರ್‌ನ್ನು ಮುಂದಿಟ್ಟುಕೊಂಡು ಸಚಿವ ತಿಮ್ಮಾಪುರರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಅವರ ತೇಜೋವಧೆ ಮಾಡಲು ಯತ್ನಿಸಲಾಗುತ್ತಿದೆ ಎಂದು ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ತಿಮ್ಮಾಪುರರು ಮೂರು ದಶಕಗಳ ರಾಜಕೀಯ ಜೀವನದಲ್ಲಿ ಎಂದಿಗೂ ತಮ್ಮ ಹೆಸರನ್ನು ಕೆಡಿಸಿಕೊಂಡಿಲ್ಲ. ಈ ಹಿಂದೆ ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಿಮ್ಮಾಪುರರ ವಿರುದ್ಧ ಆರೋಪಗಳನ್ನು ಮಾಡಿದ್ದರು. ಆದರೆ ಆ ಆರೋಪಗಳು ಸಾಬೀತಾಗದೆ ಸುಮ್ಮನಾಗಿದ್ದರು ಎಂದು ಹೇಳಿದರು.
ಈಗಲೂ ಸಹ ‘ಯಾರೋ ಒಬ್ಬ ಅಧಿಕಾರಿ ಹೆಸರು ಹೇಳಿದ್ದಾನೆ’ ಎಂಬ ಕಾರಣಕ್ಕೆ ಆರೋಪ ಮಾಡುವುದು ಎಷ್ಟು ಸರಿ? ಸಚಿವರು ಸ್ವತಃ ಏನಾದರೂ ಮಾತನಾಡಿದ್ದಾರಾ? ಈ ಬಗ್ಗೆ ಯಾವುದೇ ದಾಖಲೆಗಳಿವೆಯೇ? ದಾಖಲೆಗಳಿಲ್ಲದೆ ಮತ್ತೇಕೆ ರಾಜೀನಾಮೆ ಕೇಳಬೇಕು ಎಂದು ಪ್ರಶ್ನಿಸಿದರು.
ಬಿಜೆಪಿಗರ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಆರಂಭದಿಂದಲೂ ಯಾವುದೇ ಹುರುಳಿಲ್ಲದ ಆರೋಪಗಳನ್ನು ಸಚಿವರ ವಿರುದ್ಧ ಮಾಡಲಾಗುತ್ತಿದೆ ಎಂದು ಸದುಗೌಡ ಪಾಟೀಲ ಕಿಡಿಕಾರಿದರು.
#Petkarmedia
#FollowPetkarmedia
#Mudhol
#Bagalkot
#Congress
#SadugoudaPatil
#MinisterTimmappur
#FalseAllegations
#PoliticalNews
#KarnatakaPolitics
#BreakingNews
#LocalNews
👉 Petkarmedia ಫಾಲೋ ಮಾಡಿ | ಲೈಕ್ 👍 ಶೇರ್ 🔁 ಮಾಡಿ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ