ಬಾದಾಮಿ:ಕಿತ್ತೂರು ಸೈನಿಕ ಶಾಲೆ ಪ್ರವೇಶ ಪರೀಕ್ಷೆ: ಆಯ್ ಲರ್ನ್ ವಿದ್ಯಾರ್ಥಿನಿಯರ ಅಮೋಘ ಸಾಧನೆ

ಬಾದಾಮಿ: ಇಲ್ಲಿನ ಶ್ರೀ ಶಾರದಾ ಶಿಕ್ಷಣ ಸಂಸ್ಥೆಯ ಐ ಲರ್ನ್ ಕೋಚಿಂಗ್ ಸೆಂಟರಿನಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿಯರು ಕಿತ್ತೂರು ರಾಣಿ ಚೆನ್ನಮ್ಮ ಸೈನಿಕ ಶಾಲೆಯ ೬ ನೇ ತರಗತಿಯ ಪ್ರವೇಶ ಪರೀಕ್ಷೆಯಲ್ಲಿ ತರಬೇತಿ ಕೇಂದ್ರದ ೪ ಜನ ವಿದ್ಯಾರ್ಥಿನಿಯರು ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿನಿಯರಾದ ಕುಮಾರಿ ವೇದಶ್ರೀ ಮುಚಖಂಡಿ, ಶ್ರಾವಣಿ ಜೆ, ಸಾನ್ವಿ ಸ್ವಾದಿ, ಶ್ರೇಯಾ ನೆಕ್ಕರಗುಂದಿ, ಈ ವಿದ್ಯಾರ್ಥಿಗಳ ಸಾಧನೆಗೆ ಆಯ ಲರ್ನ್ ಕೋಚಿಂಗ್ ಸೆಂಟರ್ ನ ಮುಖ್ಯ ತರಬೇತುದಾರರು ಹಾಗೂ ಸಂಚಾಲಕ ವೆಂಕಟೇಶ್ ರಾಠೋಡ ಅವರು ಈ ಎಲ್ಲ ವಿದ್ಯಾರ್ಥಿನಿಯರು ಸ್ವಂತ ಊರಲ್ಲೇ ತರಬೇತಿ ಪಡೆದು ಚಾಲುಕ್ಯರ ನಾಡು ಬಾದಾಮಿ ನಗರದ ಕೀರ್ತಿ ಹೆಚ್ಚಿಸಿದ್ದಾರೆ. ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಕಾಮೆಂಟ್‌ಗಳು