ಬಾಗಲಕೋಟೆ: ಕಾರು ಅಪಘಾತ : ಬಿಟಿಡಿಎ ಎಇಇ ನೋಟಗಾರ ಪತ್ನಿ ಸಾವು

ಬಾಗಲಕೋಟೆ : ನವನಗರದ ತೊಟಗಾರಿಕೆ ವಿವಿ ಮುಂಭಾಗದ ಸಿಮಿಕೇರಿ ಬೈಪಾಸ್‌ಗೆ ಹೋಗುವ ರಸ್ತೆಯಲ್ಲಿ ಕಾರು ಪಲ್ಟಿಯಾಗಿ, ಬಿಟಿಡಿಎ ಸಹಾಯಕ ಕಾರ್ಯನಿರ್ವಾಹಕ ಅಭಿಂತರ ಸೋಮಲಿಂಗ ನೋಟಗಾರ ಅವರ ಪತ್ನಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರವಿವಾರ ಸಂಜೆ ಸಂಭವಿಸಿದೆ. 

ಮೃತಪಟ್ಟ ಮಹಿಳೆಯನ್ನು ದೀಪಿಕಾ ಸೋಮಲಿಂಗ ತೋಟಗಾರ (38) ಎಂದು ಗುರುತಿಸಲಾಗಿದೆ. ದೀಪಿಕಾ ಅವರು, ತಮ್ಮ ಪುತ್ರ, ಸಹೋದರನೊಂದಿಗೆ ಗದ್ದನಕೇರಿ ಕ್ರಾಸ್‌ಗೆ ತರಕಾರಿ ತರಲು ಕಾರಿನಲ್ಲಿ ಹೊರಟಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ವಿಭಜಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಇದರಿಂದ ಕಾರು ಎರಡು ಪಲ್ಟಿಯಾಗಿದೆ.

ತಲೆಗೆ ತೀವ್ರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ದೀಪಿಕಾ ಅವರು, ಸ್ಥಳದಲ್ಲಿಯೇ ಮೃತಪಟ್ಟಿದ್ದು, ಘಟನೆಯಲ್ಲಿ ಪುತ್ರ ಹಾಗೂ ಸಹೋದರ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಇಇ ಸೋಮಲಿಂಗ ನೋಟಗಾರ ಅವರ ಪತ್ನಿ ದೀಪಿಕಾ ಅವರ ನಿಧನಕ್ಕೆ ಬಿಟಿಡಿಎ ಮುಖ್ಯ ಅಭಿಯಂತರರು, ಕಾರ್ಯನಿರ್ವಾಹಕ ಅಭಿನಂತರರು, ಸಹಾಯಕರ ಕಾರ್ಯ ನಿರ್ವಾಹಕ ಅಭಿಯಂತರರು, ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಇತರ ಎಲ್ಲ ಅಧಿಕಾರಿ-ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.

ಮೃತರ ಅಂತ್ಯಕ್ರಿಯೆ, ಸ್ವಗ್ರಾಮ ಬಾದಾಮಿ ತಾಲೂಕಿನ ಮುತ್ತಲಗೇರಿಯಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.



ಕಾಮೆಂಟ್‌ಗಳು