ಬಾಗಲಕೋಟೆ: ವಿದ್ಯಾಗಿರಿ ವಲಯ ಗೆಳೆಯರ ಬಳಗದ ವತಿಯಿಂದ 15ನೇ ವರ್ಷದ ಹೋಳಿ ಆಚರಣೆ ಅಂಗವಾಗಿ ಆಯೋಜಿಸಿದ್ದ ಹಲಿಗೆ ಮಜಲಿನ ಸ್ಪರ್ಧೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಶಶಿಧರ ಕುರೇರ ಅವರು ಹಲಿಗೆ ಬಾರಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಬಳ್ಳಾರಿ ಆಗಮಿಸಿ ಶುಭ ಹಾರೈಸಿದರು. ಹೋಳಿ ಆಚರಣಾ ಸಮಿತಿಯ ಅಧ್ಯಕ್ಷ ಶ್ರೀ ಕಳಕಪ್ಪ ಬಾದೋಡಗಿ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಮಾಹಾಬಳೇಶ್ವರ ಗುಡಗುಂಟಿ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು.
ವೇದಿಕೆಯಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಯಲ್ಲಪ್ಪ ಕ್ಯಾದಿಗೇರಿ, ಉಪಾಧ್ಯಕ್ಷರಾದ ಮುತ್ತು ಜೋಳದ ಮತ್ತು ಶರಣು ಹುರಕಡ್ಲಿ, ಕಾರ್ಯದರ್ಶಿ ವೆಂಕಟೇಶರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿವಕುಮಾರ ಮೇಲ್ನಾಡ ನಿರೂಪಣೆ ಮಾಡಿದರು. ಸ್ಪರ್ಧೆಯ ನಿರ್ಣಾಯಕರಾಗಿ ವಿಜಯ ಸುಲಾಖೆ ಕಾರ್ಯನಿರ್ವಹಿಸಿದರು.
ವಿವಿಧ ಓಣಿಗಳಿಂದ ಬಾಲಕರ, ಯುವಕರ ಹಾಗೂ ಮಹಿಳೆಯರ ಒಟ್ಟು 11 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿತು.
ಯುವಕರ ವಿಭಾಗದ ಫಲಿತಾಂಶ:
ಪ್ರಥಮ ಸ್ಥಾನ – ಹಳಪೇಟೆಯ ಶ್ರೀ ಗಣೇಶ ಮಿತ್ರ ಮಂಡಳಿ
ದ್ವಿತೀಯ ಸ್ಥಾನ – ನವನಗರ ಸೆಕ್ಟರ್-8ರ ಶ್ರೀ ಮಾರುತೇಶ್ವರ ಯುವಕ ಮಂಡಳಿ
ತೃತೀಯ ಸ್ಥಾನ – ಕಿಲ್ಲಾ ಗಲ್ಲಿಯ ವಿಕ್ರಮ ಯುವಕ ಮಂಡಳಿ
ಕಾರ್ಯಕ್ರಮದಲ್ಲಿ ವಿದ್ಯಾಗಿರಿ ಗೆಳೆಯರ ಬಳಗದ ಸದಸ್ಯರು, ಸಾರ್ವಜನಿಕರು, ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ