ಬೀಳಗಿ: ತಾಲ್ಲೂಕಿನ ಚಿಕ್ಕಸಂಗಮ ಸುತ್ತಮುತ್ತ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶಕ್ಕೆ ಶಾಸಕರಾದ ಜೆ.ಟಿ. ಪಾಟೀಲ ಅವರು ಜಿಲ್ಲಾಧಿಕಾರಿಯವರು ಹಾಗೂ ಇತರ ಅಧಿಕಾರಿಗಳೊಂದಿಗೆ ದೋಣಿ ಮೂಲಕ ಭೇಟಿ ನೀಡಿ ಪರಿಸರ ಹಾಗೂ ಜೀವ ವೈವಿಧ್ಯವನ್ನು ಪರಿಶೀಲಿಸಿದರು.
12359 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಈ ಮೀಸಲು ಪ್ರದೇಶದಲ್ಲಿ ಅನೇಕ ಪಕ್ಷಿ ಪ್ರಭೇದಗಳು, ಸಸ್ತನಿಗಳು, ಸರೀಸೃಪಗಳು ಹಾಗೂ 23 ಜಾತಿಯ ಮೀನುಗಳು ಸೇರಿದಂತೆ ಅಪಾರ ಜೀವ ವೈವಿಧ್ಯವಿದೆ. ದ್ವೀಪಗಳ ಸರಣಿ, ನದಿ ತಟದ ಹಸಿರು ವಲಯ ಹಾಗೂ ಜಲಜೀವ ಸಂಕುಲಗಳು ಈ ಪ್ರದೇಶದ ವೈಶಿಷ್ಟ್ಯಗಳಾಗಿವೆ.
ಈ ಪ್ರದೇಶವನ್ನು ಅಂತರಾಷ್ಟ್ರೀಯ ಮಟ್ಟದ ಪರಿಸರ ಪ್ರವಾಸೋದ್ಯಮ ತಾಣವಾಗಿ ರೂಪಿಸುವ ಸಂಕಲ್ಪವನ್ನು ಶಾಸಕರಾದ ಜೆ.ಟಿ. ಪಾಟೀಲ ಅವರು ವ್ಯಕ್ತಪಡಿಸಿದ್ದು, ಜೀವ ವೈವಿಧ್ಯ ಸಂರಕ್ಷಣೆಗೆ ಆದ್ಯತೆ ನೀಡುವ ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಯೋಜನೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ