ಬಾಗಲಕೋಟೆ: ಬಿ.ವೈ. ವಿಜಯೇಂದ್ರ ಅವರ ಹೇಳಿಕೆಗೆ ಮಹಾದೇವಿ ಮೇಟಿ ತಿರುಗೇಟು ನೀಡಿದ್ದು, ಬಿಜೆಪಿ ನಾಯಕತ್ವದ ಕಾರ್ಯಕ್ಷಮತೆ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
“ಬಾಗಲಕೋಟೆ ಜನತೆಗೆ ನಿಮ್ಮ ಮನೆಯ ಮಗಳು ಮಹಾದೇವಿ ಉಲ್ಲಪ್ಪ ಮಾಡುವ ನಮಸ್ಕಾರಗಳು” ಎಂದು ಆರಂಭಿಸಿದ ಅವರು, ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಪಕ್ಷ ಯಾವ ಚುನಾವಣೆಯಲ್ಲಿ ಗೆದ್ದಿದೆ ಎಂದು ಪ್ರಶ್ನಿಸಿದರು.
ವಿಜಯೇಂದ್ರ ಬಾಗಲಕೋಟೆ ಜಿಲ್ಲೆಗೆ ಬಂದಾಗ ಮಾಧ್ಯಮಗಳ ಮುಂದೆ ಹಲವು ಹೇಳಿಕೆಗಳನ್ನು ನೀಡುತ್ತಾರೆ. ಆದರೆ ಅಧ್ಯಕ್ಷರಾದ ಬಳಿಕ ಯಾವುದೇ ಪ್ರಮುಖ ಚುನಾವಣೆ ಅಥವಾ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆಯೇ ಎಂದು ಸ್ಪಷ್ಟಪಡಿಸಲಿ ಎಂದು ಮಹಾದೇವಿ ಮೇಟಿ ಪ್ರಶ್ನಿಸಿದರು.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಬಾಗಲಕೋಟೆಗೆ ಬಂದರೂ ಕಾಂಗ್ರೆಸ್ ಪಕ್ಷ ಬರೋದಿಲ್ಲ ಎಂದು ವಿಜಯೇಂದ್ರ ಹೇಳುತ್ತಾರೆ. ಆದರೆ ತಮ್ಮ ಅಧ್ಯಕ್ಷತೆಯಲ್ಲಿ ಪಕ್ಷದ ಕಾರ್ಯಕ್ಷಮತೆ ಏನು ಎಂಬುದನ್ನು ಜನತೆಗೆ ಹೇಳಬೇಕು ಎಂದು ಅವರು ತಿರುಗೇಟು ನೀಡಿದ್ದಾರೆ.
ಈ ಕುರಿತು ಮಹಾದೇವಿ ಮೇಟಿ ಅವರು ತಮ್ಮ ಸಾಮಾಜಿಕ ಜಾಲತಾಣದ ಮುಖಪುಟದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ