ಕಲಾದಗಿ ಪೊಲೀಸ್ ಠಾಣೆಗೆ ಐಜಿಪಿ ಚೇತನ್ ಸಿಂಗ್ ರಾಥೋರ್ ವಾರ್ಷಿಕ ಪರಿವೀಕ್ಷಣೆ

ಬಾಗಲಕೋಟೆ: ಉತ್ತರ ವಲಯ ಬೆಳಗಾವಿ ಪೊಲೀಸ್ ಮಹಾ ನಿರೀಕ್ಷಕರಾದ ಶ್ರೀ ಚೇತನ್ ಸಿಂಗ್ ರಾಥೋರ್ (ಐಪಿಎಸ್) ಅವರು ಇಂದು ಕಲಾದಗಿ ಪೊಲೀಸ್ ಠಾಣೆ ಹಾಗೂ ಬಾಗಲಕೋಟೆ ಗ್ರಾಮೀಣ ವೃತ್ತ ನಿರೀಕ್ಷಕರ ಕಚೇರಿಗೆ ವಾರ್ಷಿಕ ಪರಿವೀಕ್ಷಣೆ ನಡೆಸಿದರು.


ಪರಿಶೀಲನೆಯ ವೇಳೆ ಠಾಣೆಯ ವಿವಿಧ ದಾಖಲೆಗಳು, ಕಚೇರಿ ನಿರ್ವಹಣೆ, ಅಪರಾಧ ಪ್ರಕರಣಗಳ ತನಿಖಾ ಪ್ರಗತಿ, ಸಿಬ್ಬಂದಿಯ ಹಾಜರಾತಿ ಹಾಗೂ ಶಿಸ್ತು ಕ್ರಮಗಳನ್ನು ಸಮಗ್ರವಾಗಿ ಅವಲೋಕಿಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಾರ್ವಜನಿಕರೊಂದಿಗೆ ಸ್ನೇಹಪೂರ್ಣವಾಗಿ ವರ್ತಿಸುವುದು, ಪ್ರಕರಣಗಳ ತ್ವರಿತ ಹಾಗೂ ಪರಿಣಾಮಕಾರಿ ತನಿಖೆ ನಡೆಸುವುದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹೆಚ್ಚಿನ ಜವಾಬ್ದಾರಿತನ ವಹಿಸುವುದು ಮತ್ತು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವಂತೆ ಅಗತ್ಯ ಸೂಚನೆಗಳನ್ನು ನೀಡಿದರು.

ಪೊಲೀಸ್ ಸೇವೆಯ ಗುಣಮಟ್ಟವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ತಲುಪಿಸಲು ಎಲ್ಲರೂ ಸಮರ್ಪಿತವಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ಕಾಮೆಂಟ್‌ಗಳು