ಬಾಗಲಕೋಟೆ:ಕೌಲಪೇಟೆ ಮಹಿಳೆಯರಿಂದ ರೊಟ್ಟಿ ಬುತ್ತಿ ಸಮರ್ಪಣೆ

ಬಾಗಲಕೋಟೆ: ನಗರದ ಟೀಕಿನಮಠದ ಶ್ರೀ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಬುಧವಾರ ಕೌಲಪೇಟೆ ಓಣಿಯ 150ಕ್ಕೂ ಹೆಚ್ಚು ಮಹಿಳೆಯರು ಭಕ್ತಿಭಾವದಿಂದ 3200 ರೊಟ್ಟಿಗಳ ಸಮೇತ ಬುತ್ತಿ ಬುಟ್ಟಿಯನ್ನು ಶ್ರೀಮಠಕ್ಕೆ ಸಮರ್ಪಿಸಿದರು.




ಈ ಸಂದರ್ಭದಲ್ಲಿ ಮಹಿಳೆಯರು 1 ಕ್ವಿಂಟಲ್ ಬುಂದಿ, 10 ಕೆಜಿ ಚಟ್ನಿ ಸೇರಿದಂತೆ ಸುಮಾರು ₹4650 ಕಾಣಿಕೆಯನ್ನು ಸಮರ್ಪಿಸಿ ಭಕ್ತಿ ಮತ್ತು ಸೇವಾಭಾವ ಮೆರೆದರು. ಮಹೋತ್ಸವದ ನಿಮಿತ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಶೇಷ ಪೂಜೆ, ಮಂಗಳಾರತಿ ನೆರವೇರಿಸಿದರು.

ಕೌಲಪೇಟೆ ಮಹಿಳೆಯರ ಈ ಅಪರೂಪದ ಸೇವೆ ಮತ್ತು ಸಮರ್ಪಣೆಗೆ ಭಕ್ತರಿಂದ ಪ್ರಶಂಸೆ ವ್ಯಕ್ತವಾಯಿತು.

ಕಾಮೆಂಟ್‌ಗಳು