ಬಾಗಲಕೋಟೆ: ದೇಶದಲ್ಲಿ ಐತಿಹಾಸಿಕ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಬಾಗಲಕೋಟೆ ಹೋಳಿ ಹಬ್ಬದ ಹಲಗೆ ಮಜಲನ್ನು ಉಳಿಸಿ ಬೆಳೆಸುವಂತಹ ಕೆಲಸ ಬಾಗಲಕೋಟೆಯ ಜನರಿಂದ ಆಗಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿAದ ಯುವ ಪತ್ರಕರ್ತ ದಿ.ಪ್ರಕಾಶ ಗುಳೇದಗುಡ್ಡ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಲಗೆ ಮಜಲು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಎಲ್ಲ ವರ್ಗದವರು ಹೋಳಿ ಹಬ್ಬವನ್ನು ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ನಮ್ಮ ಹಬ್ಬದ ಪರಂಪರೆಯನ್ನು ತಿಳಿಸಿಕೊಡಬೇಕಾಗಿದೆ. ಹೋಳಿ ಹಬ್ಬವನ್ನು ಎಲ್ಲರೂ ಸಹೋದರರಂತೆ ಸ್ನೇಹಮಯವಾಗಿ ಆಚರಿಸಬೇಕು ಎಂದು ಹೇಳಿದರು.
ದುಷ್ಟ ಶಕ್ತಿಗಳು ಹೋಗಬೇಕು. ಒಳ್ಳೆಯ ವಿಚಾರ ಎಲ್ಲರಲ್ಲಿ ಬರಬೇಕು. ಅಹಂಕಾರ ನಾಶ ಮಾಡುವುದು ಹೋಳಿ ಹಬ್ಬದ ಪ್ರತೀಕವಾಗಿದೆ. ಕೆಂಪು ಶೌರ್ಯ, ಹಸಿರು ಸಮೃದ್ಧಿ, ನೀಲಿ ವಿಶ್ವಾಸ, ಹಳದಿ ಆನಂದವನ್ನು ಉಂಟು ಮಾಡುತ್ತದೆ.ಪತ್ರಕರ್ತರು ಬಾಗಲಕೋಟೆಯ ಜನತೆಯ ಜತೆಗೆ ಹೋಳಿ ಹಬ್ಬವನ್ನು, ಹಲಗೆ ಮಜಲು ಆಚರಿಸುವುದು ಶ್ಲಾಘನೀಯ ಎಂದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಹಬ್ಬಗಳೆಂದರೆ ನಮ್ಮ ಸಂಸ್ಕೃತಿಯ ಪ್ರತಿಬಿಂಬಿಸುತ್ತದೆ.ನಮ್ಮಲ್ಲಿರುವ ಸಾಮರಸ್ಯವನ್ನು, ಸಂತಸವನ್ನು ಹಾಗೂ ಸಮಾಜದಲ್ಲಿ ಒಳ್ಳೆಯ ಬಾಳ್ವೆ ಮಾಡಲು ಹಬ್ಬಗಳು ದೇಶದಲ್ಲಿ ಆಚರಣೆಯಲ್ಲಿವೆ. ಹಬ್ಬಗಳ ಪ್ರಾಮುಖ್ಯತೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.
ನಮ್ಮಲ್ಲಿ ಕಷ್ಟಕಾರ್ಪಣ್ಯಗಳನ್ನು ದೂರ ಮಾಡಿ, ಸಂತೋಷದಿAದ ಇರುವಂತೆ ನಮ್ಮ ಹಬ್ಬಗಳು ಮಾಡುತ್ತವೆ. ನಮ್ಮಲ್ಲಿರುವ ತಪ್ಪುಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ನಾವು ಮಾಡಿದ ತಪ್ಪುಗಳನ್ನು ಮರೆತು ಹೋಗಲು ಹೋಳಿ ಹಬ್ಬವನ್ನು ಆಚರಿಸುತ್ತಿವೆ. ಕಾಮಕ್ರೋಧ, ಮದ, ಮತ್ಸರ, ಲೋಭಗಳನ್ನು ಸುಟ್ಟು ಹಾಕಿ ಯೊಸ ಯುಗ ಪ್ರಾರಂಭ ಮಾಡಲು ಹೋಳಿ ಹಬ್ಬ ಆಚರಿಸುವ ಪ್ರತೀತಿ ಇದೆ ಎಂದರು.
ಬಾಗಲಕೋಟೆಯ ಹೋಳಿ ಹಬ್ಬಕ್ಕೆ ವಿಶೇಷತೆ ಇದೆ. ವಿವಿಧೆತೆಯಲ್ಲಿ ಏಕತೆ, ವೈಭೋವಿತವಾಗಿ ವಿಜೃಂಭಣೆಯಿAದ ಹೋಳಿ ಹಬ್ಬವನ್ನು ಇಲ್ಲಿ ಆಚರಿಸಲಾಗುತ್ತದೆ. ಬಾಗಲಕೋಟೆಯ ಪತ್ರಕರ್ತರು ಕೂಡ ಇಲ್ಲಿಯ ಜನರೊಂದಿಗೆ ಮುಂಚೂಣಿಯಲ್ಲಿ ನಿಂತು ಹಲಗೆ ಮೇಳ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಮಾಜ ಘಾತುಕ ಶಕ್ತಿಗಳು ಶಾಂತಿ ಕದಡುವ ಸಂದರ್ಭ ಬರುತ್ತಿವೆ. ಯಾವುದೇ ಕಾರಣಕ್ಕೂ ಹಬ್ಬಗಳನ್ನು ಒಳ್ಳೆಯ ಉದ್ದೇಶಕ್ಕೆ ಆಚರಣೆ ಮಾಡಲಾಗುತ್ತದೆ. ಈ ಮಹತ್ವನ್ನು ಅರಿತುಕೊಂಡು ಮನೆಯಲ್ಲಿ ಎಲ್ಲರಿಗೂ ತಿಳಿಸಬೇಕು. ಶಿಸ್ತುಬದ್ಧವಾಗಿ ಹೋಳಿ ಆಚರಣೆ ಮಾಡಿ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಮಾತನಾಡಿ, ಸಾಮಾರಸ್ಯ, ಎಲ್ಲ ಸಮಾಜವನ್ನು ಒಳಗೊಂಡು ಆಚರಣೆ ಮಾಡುವ ಹಬ್ಬ ಹೋಳಿಯಾಗಿದೆ. ನಗರದಲ್ಲಿ ಶಾಂತಿ ಸುವ್ಯವಸ್ಥೆ ಇದ್ದು ಎಲ್ಲರೂ ಹಬ್ಬವನ್ನು ಉತ್ಸಾಹದಿಂದ ಆಚರಿಸಬೇಕು. ಯಾರೂ ಶಾಂತಿಗೆ ಭಂಗವನ್ನು ಉಂಟು ಮಾಡದೇ ಹಬ್ಬ ಆಚರಿಸಬೇಕು. ಅಹಿತಕರ ಘಟನೆ ನಡೆಸುವವ ಮೇಲೆ ಪೊಲೀಸ್ ಇಲಾಖೆ ಸದಾ ಕಣ್ಣು ಇಟ್ಟಿರುತ್ತದೆ. ಶಾಂತಿ ಸುವ್ಯವಸ್ಥೆ ನೆಲೆಸಲು ಇಲಾಖೆಯೊಂದಿಗೆ ಎಲ್ಲರೂ ಸಹಕಾರ ನೀಡಿದ್ದಾರೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಈಶ್ವರ ಶೆಟ್ಟರ ಮಾತನಾಡಿ, ಬಾಗಲಕೋಟೆ ಹೋಳಿ ಹಬ್ಬವನ್ನು ಜಾತಿ,ಮತ, ಬೇಧಭಾವ ಇಲ್ಲದೇ ಎಲ್ಲರೂ ಒಗ್ಗೂಡಿಕೊಂಡು ಸೌಹಾರ್ದತೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಹೋಳಿ ಹಬ್ಬಕ್ಕೆ ಬಾಗಲಕೋಟೆಯಲ್ಲಿ ತನ್ನದೇಯಾದ ವೈಶಿಷ್ಯತೆ ಇದ್ದು ಇದನ್ನು ಉಳಿಸಿಕೊಂಡು ಹೋಗಬೇಕಾಗಿದೆ ಎಂದರು.
ಅಧ್ಯಕ್ತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಮಹೇಶ ಅಂಗಡಿ ಮಾತನಾಡಿ, ಹಿರಿಯ ಪತ್ರಕರ್ತ ದಿ.ರಾಮ ಮನಗೂಳಿಯವರು ಹೋಳಿ ಹಬ್ಬವನ್ನು ಉಳಿಸಿಕೊಂಡು ಹೋಗಲು ಬಾಗಲಕೋಟೆಯ ಜನತೆಯ ಜತೆಗೆ ಪತ್ರಕರ್ತರು ಆಚರಿಸಿಕೊಂಡು ಹೋಗಬೇಕು ಎಂದು ಭದ್ರಬುನಾದಿಯನ್ನು ಹಾಕಿಕೊಟ್ಟರು ಅವರಂತೆ ಈ ಹಬ್ಬವನ್ನು ಪತ್ರಕರ್ತರೆಲ್ಲರೂ ಸೇರಿಕೊಂಡು ಆಚರಿಸುತ್ತಿದ್ದೇವೆ. ಮುಂದಿನ ವರ್ಷ ಪತ್ರಕರ್ತರಿಗೆ ಹಲಗೆ ಮೇಳ ಸ್ಪರ್ಧೆಯನ್ನು ಆಯೋಜಿಸಲಾಗುವುದು. ಜಿಲ್ಲಾ ಆಡಳಿತ ಪ್ರೋತ್ಸಾಹ ನೀಡಬೇಕು ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಗಾಣಿಗೇರ ಸ್ವಾಗತಿಸಿದರು. ಕಾರ್ಯಕಾರಿಣಿ ಸದಸ್ಯ ಮಂಜುನಾಥ ತಳವಾರ ನಿರೂಪಿಸಿದರೆ ಕೃಷ್ಣಾ ಹಾದಿಮನಿಯವರು ಕಾರ್ಯಕ್ರಮವನ್ನು ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಹಲಗೆಗಳಿಗೆ ಕಾರ್ಯಕಾರಿಣಿ ಸದಸ್ಯ ಅಭಯ ಮನಗೂಳಿ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಪತ್ರಕರ್ತರು ಭಾಗವಹಿಸಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ