ಬಾಗಲಕೋಟೆಯಲ್ಲಿ ಮಹಾಶಿವರಾತ್ರಿ ಅಂಗವಾಗಿ ಭಕ್ತಿ ಶಿವ ಸಂಗೀತ ಕಾರ್ಯಕ್ರಮ

ಬಾಗಲಕೋಟೆ: ಮಹಾಶಿವರಾತ್ರಿ ಅಂಗವಾಗಿ ಶ್ರೀ ಮಾಧವ ಸೇವಾಕೇಂದ್ರ ವತಿಯಿಂದ ಭಕ್ತಿಭಾವವನ್ನು ಉದ್ದೀಪನಗೊಳಿಸುವ ವಿಶೇಷ ಭಕ್ತಿ ಶಿವ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮವು ಫೆಬ್ರವರಿ 15, 2026 ರವಿವಾರ ಸಂಜೆ 6.30 ಗಂಟೆಯಿಂದ ಬಸವ ವೃತ್ತದಲ್ಲಿರುವ ಶ್ರೀ ಹೊಳೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಗುಳೇದಗುಡ್ಡದ ಖ್ಯಾತ ಗಾಯಕರು ಶ್ರೀ ಜ್ಞಾನೇಶ್ವರ ಬೊಂಬಲೇಕರ (ಗವಾಯಿ), ಶ್ರೀ ದತ್ತಾತ್ರೇಯ ಶಿಂತ್ರೆ, ಶ್ರೀ ಹುಚ್ಚೇಶ್ ಮೇಟಿ ಹಾಗೂ ಸಂಗಡಿಗರು ಭಕ್ತಿ ಸಂಗೀತವನ್ನು ಪ್ರಸ್ತುತಪಡಿಸಲಿದ್ದಾರೆ. ವಾದ್ಯ ವೃಂದದಲ್ಲಿ ಹಾರ್ಮೋನಿಯಂನಲ್ಲಿ ಶ್ರೀ ಸೋಮಶೇಖರ ಗಡೇದಗೌಡ್ರ, ತಬಲಾ ಹಾಗೂ ಪ್ಯಾಡ್‌ನಲ್ಲಿ ಶ್ರೀ ಬಸವರಾಜ ದಿಂಡಿ, ಮೃದಂಗದಲ್ಲಿ ಹುಬ್ಬಳ್ಳಿಯ ಶ್ರೀ ಕಾರ್ತಿಕ ಭಾಗವಹಿಸಲಿದ್ದಾರೆ.

ಇದೇ ವೇಳೆ ದೃತಿ ಬೆಳಗಲ್ಲ, ಶೃತಿ ನಾಗರಾಳ ಹಾಗೂ ಸ್ತುತಿ ವಂದಕುದರಿ ಬಾಲಕಿಯರಿಂದ ಭರತನಾಟ್ಯ ಪ್ರದರ್ಶನವೂ ನಡೆಯಲಿದೆ.

ಮಹಾಶಿವರಾತ್ರಿ ಪಾವನ ಸಂದರ್ಭದಲ್ಲಿ ಆಯೋಜಿಸಿರುವ ಈ ಭಕ್ತಿ ಸಂಗೀತ ಸಂಭ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಮಾಧವ ಸೇವಾಕೇಂದ್ರದ ಅಧ್ಯಕ್ಷ ನಾಗರಾಜ ಹದ್ಲಿ ಮನವಿ ಮಾಡಿದ್ದಾರೆ.

ಕಾಮೆಂಟ್‌ಗಳು