ಬಾಗಲಕೋಟೆ: ನವನಗರ ಪೂರ್ವ ಭಾಗದಲ್ಲಿ ವಿರಾಟ್ ಹಿಂದೂ ಸಮ್ಮೇಳನ ಅಂಗವಾಗಿ ನಡೆದ ಭವ್ಯ ಶೋಭಾಯಾತ್ರೆ ಸಂಸ್ಕೃತಿ, ಭಕ್ತಿ ಹಾಗೂ ಏಕತೆಯ ಪ್ರತಿರೂಪವಾಗಿ ಕಂಗೊಳಿಸಿತು. ಮಕ್ಕಳ ಕೋಲಾಟ ಪ್ರದರ್ಶನ, ಶಿವಾಜಿ ಮಹಾರಾಜರ ಪ್ರತಿಮೆ ಸೇರಿದಂತೆ ವಿವಿಧ ಸಾಂಸ್ಕೃತಿಕ ದೃಶ್ಯಗಳು ಸಾರ್ವಜನಿಕರ ಮನಸೆಳೆಯುವಂತಿದ್ದವು.
ರಾಜ್ಯಸಭಾ ಸದಸ್ಯ ಶ್ರೀ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ,ಮಾಜಿ ಶಾಸಕ ವೀರಣ್ಣ ಚರಂತಿಮಠ, ಸಮ್ಮೇಳನದ ಅಧ್ಯಕ್ಷ ಶ್ರೀ ಪ್ರಭುಸ್ವಾಮಿ ಸರಗಣಾಚಾರಿ ಸೇರಿದಂತೆ ಹಲವು ಗಣ್ಯರು ಹಾಗೂ ನೂರಾರು ಕಾರ್ಯಕರ್ತರು, ಮಾತೆಯರು ಉತ್ಸಾಹದಿಂದ ಭಾಗವಹಿಸಿ ಮೆರವಣಿಗೆಯನ್ನು ಭವ್ಯಗೊಳಿಸಿದರು.
ಸಂಸ್ಕೃತಿ, ಭಕ್ತಿ ಮತ್ತು ಒಗ್ಗಟ್ಟಿನ ಸಂದೇಶ ಸಾರಿದ ಈ ಶೋಭಾಯಾತ್ರೆ ನವನಗರದಲ್ಲಿ ವಿಶೇಷ ಸಂಭ್ರಮ ಮೂಡಿಸಿತು.
#Bagalkot #Navanagar #HinduSammelana #Shobhayatre #Culture #KarnatakaNews #PetkarMedia




ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ