ಬಾದಾಮಿ:ಅನ್ನ ಭಾಗ್ಯ ಅಕ್ಕಿ ವಶ: ಇಬ್ಬರು ಆರೋಪಿಗಳ ಬಂಧನ

ಬಾದಾಮಿ: ಸರಕಾರದ ವಿವಿದ ಯೋಜನೆಗಳಲ್ಲಿ ಉಚಿತವಾಗಿ ವಿತರಿಸುವ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಒಯ್ಯುತ್ತಿದ್ದ ಇಬ್ಬರನ್ನು ಶುಕ್ರವಾರ ‌ನಗರದ ಜನತಾ ಪ್ಲಾಟ್ ಮಸೀದಿ ಹತ್ತಿರ ತಗಡಿನ ಶೆಡ್ ನಲ್ಲಿ ವಶಕ್ಕೆ ಪಡೆದು ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. 

ಬಾಗಲಕೋಟೆ ತಾಲೂಕಿನ ಸಿಕ್ಕೇರಿ ಕ್ರಾಸ್ ನಿವಾಸಿಗಳಾದ ವಿನೋಧ ಲಮಾಣಿ ಮತ್ತು ಕಲ್ಪೇಶ ಚವ್ಹಾನ ಇಬ್ಬರು ಆರೋಪಿಗಳಿಂದ ರೂ.6960 ಮೌಲ್ಯದ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.‌ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆಯ ನಿರೀಕ್ಷಕ ಮಂಜುನಾಥ ರೊಟ್ಟಿ ಇವರು ಅನಿರೀಕ್ಷಿತವಾಗಿ ದಾಳಿ ಮಾಡಿ ಸರಕಾರದ ಯಾವುದೇ ಅನುನತಿ ಇಲ್ಲದೇ ಮಾರಾಟ ಮಾಡಲು ಯತ್ನಿಸಿದ ಇಬ್ಬರಿಂದ ಅಕ್ಕಿ ವಶಕ್ಕೆ ಪಡೆದು ಇಬ್ಬರ ವಿರುದ್ದ ಸ್ಥಳೀಯ ಪೊಲೀಸ್ ಠಾಣೆಯನ್ನು ಪ್ರಕರಣ ದಾಖಲಿಸಲಾಗಿದೆ.‌

ಕಾಮೆಂಟ್‌ಗಳು