ಬಾಗಲಕೋಟೆ: ಬಿಜೆಪಿ ಅಭ್ಯರ್ಥಿ ಪರ ವಾರ್ಡ್ 30ರಲ್ಲಿ ಪ್ರಚಾರ
By Petkarmedia news desk |Bagalkot
ಬಾಗಲಕೋಟೆ: ವಿಧಾನಸಭೆಯ ಉಪಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಭ್ಯರ್ಥಿ ಶ್ರೀ ವೀರಣ್ಣ ಚರಂತಿಮಠರ ಪರ ವಾರ್ಡ್ ಸಂಖ್ಯೆ 30ರ 178 ಮತ್ತು 179ನೇ ಬೂತ್‌ಗಳಲ್ಲಿ ಪ್ರಚಾರ ಕಾರ್ಯ ಜೋರಾಗಿ ನಡೆಯಿತು.
ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗ ಸಹಪ್ರಭಾರಿಯಾದ ಬಸವರಾಜ ಯಂಕಂಚಿ, ನಗರಸಭೆ ಸದಸ್ಯರಾದ ಚನ್ನಯ್ಯ ಹಿರೇಮಠ ಸೇರಿದಂತೆ ಪಕ್ಷದ ಮುಖಂಡರುಗಳಾದ ವಿಶ್ವನಾಥ ಸೋರಗಾಂವಿ, ನ್ಯಾಯವಾದಿ ವರ್ಧಮಾನ ಕೋರಿ, ಅನಿಲ್ ಗುಬಚೆ, ಆಕಾಶ ಮೊರೆ, ಬಾಬು ಭೋವಿ, ಆನಂದ ಕುಲಕರ್ಣಿ, ಧರೇಶ ಹುದ್ದಾರ ಹಾಗೂ ನಾರಾಯಣ ಗುಡಿ ಮುಂತಾದವರು ಭಾಗವಹಿಸಿ ಅಭ್ಯರ್ಥಿ ಪರ ಮತಯಾಚನೆ ನಡೆಸಿದರು.
ಬಿಜೆಪಿ ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ ಅವರು ಪ್ರಕಟಣೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ