ಬಾದಾಮಿ: ವಿಷಪೂರಿತ ಆಹಾರ ಸೇವನೆ: 8 ಆಡುಗಳು ಸಾವು – ಕುರಿಗಾಯಿಗೆ ಪರಿಹಾರ ನೀಡುವಂತೆ ಆಗ್ರಹ

ಬದಾಮಿ: ಬದಾಮಿ ತಾಲೂಕಿನ ನಾಗರಾಳ ಎಸ್.ಬಿ. ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವನೆಯಿಂದ ಎಂಟು ಆಡುಗಳು ಸಾವನ್ನಪ್ಪಿದ ಘಟನೆ ನಡೆದಿದೆ.



ಗ್ರಾಮದ ಬಸಪ್ಪ ಪಾಂಡಪ್ಪ ಅಮಣಿ (38) ಎಂಬ ಕುರಿಗಾಯಿ ಮಾಲೀಕರಿಗೆ ಸೇರಿದ ಆಡುಗಳು ವಿಷಪೂರಿತ ಆಹಾರ ಸೇವಿಸಿದ ಪರಿಣಾಮ ಅಸ್ವಸ್ಥಗೊಂಡಿವೆ. ಮಾಹಿತಿ ತಿಳಿದ ಕೂಡಲೇ ಪಶು ಸಂಗೋಪನಾ ಇಲಾಖೆಯ  ಅಂಬುಲೆನ್ಸ್ ವಾಹನ ನಾಗರಾಳ ಎಸ್.ಬಿ. ಗ್ರಾಮಕ್ಕೆ ತೆರಳಿ ಚಿಕಿತ್ಸೆ ನೀಡಿತು.

ಡಾ. ಎಸ್.ಎಸ್. ಪಾಟೀಲ್ ಅವರ ನೇತೃತ್ವದ ವೈದ್ಯಕೀಯ ತಂಡ ಸ್ಥಳಕ್ಕೆ ಧಾವಿಸಿ ತುರ್ತು ಚಿಕಿತ್ಸೆ ನೀಡಿದರು. ಜೊತೆಗೆ ಚೋಳಚಗುಡ್ಡ ಸಂಸ್ಥೆಯ ಕಿರಿಯ ಪಶು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯೂ ಸಹ ಪ್ರಾಥಮಿಕ ಚಿಕಿತ್ಸೆ ನೀಡಲು ಮುಂದಾದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ 8 ಆಡುಗಳು ಸಾವನ್ನಪ್ಪಿವೆ.

ಈ ಘಟನೆಯಿಂದ ಸುಮಾರು ₹2 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ನಷ್ಟವಾಗಿದ್ದು, ಬಸಪ್ಪ ಪಾಂಡಪ್ಪ ಅಮಣಿ ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಆದ್ದರಿಂದ ಕರ್ನಾಟಕ ಸರ್ಕಾರ ಹಾಗೂ ಪಶು ಸಂಗೋಪನಾ ಇಲಾಖೆ ತುರ್ತು ಕ್ರಮ ಕೈಗೊಂಡು ಪರಿಹಾರವನ್ನು ಶೀಘ್ರವಾಗಿ ಒದಗಿಸಬೇಕು ಎಂದು ಕುರಿಗಾಯಿಗಳು ಆಗ್ರಹಿಸಿದ್ದಾರೆ.

ಕಾಮೆಂಟ್‌ಗಳು