ವಿಜೃಂಭಣೆಯ ಕೆರೂರ ರಾಚೋಟೇಶ್ವರ ರಥೋತ್ಸವ ಸಂಪನ್ನ
By Petkarmedia news desk| bagalkot
ಬಾಗಲಕೋಟೆ:ಶ್ರದ್ಧೆ ಭಕ್ತಿ ಹಾಗೂ ಬಾವ್ಯಕ್ಕೆ ಸಂಗಮದ ದ್ಯೋತಕವಾಗಿ ಆಚರಿಸಲ್ಪಡುವ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದ ರಾಚೋಟೇಶ್ವರ ವೈವಿಧ್ಯಮಯ ಜಾತ್ರಾ ಉತ್ಸವ ಶನಿವಾರ ಮುಸ್ಸಂಜೆ ೬.೪೫ ಗಂಟೆಗೆ ಯಶಸ್ವಿಯಾಗಿ ನೆರವೇರಿತು.
ಮಧ್ಯಾಹ್ನ ನೆತ್ತಿ ಸುಡು ಬಿಸಿನಲ್ಲಿ ನೇಸರ ತನ್ನ ಪ್ರಖರತೆಯೂಂದಿಗೆ ಧಗೆಯ ದರ್ಬಾರು ತೋರಿದರೆ ಗೋಧಿ ಹುಗ್ಗಿಯ ಬೋಜನಾ ಸವಿದ ಭಕ್ತರು ಸೆಕೆಯ ಸಂಕಟ ಬಿಸಿಲು ಝಳದಲ್ಲಿ ಚಡಪಡಿಸಿ ತಂಪು ಪಾನೀಯಗಳು ಮೂರೆ ಹೋದರು
ಜಾತ್ರಾ ಉತ್ಸವದಲ್ಲಿ ಬೆಳಗ್ಗೆ ವೀರಗಾಸೆ ಕುಣ ತ ಪಲ್ಲಕ್ಕಿ ಹಾಗೂ ನಂದಿಕೋಲು ಉತ್ಸವಗಳ ಮತ್ತು ಶಸ್ತ್ರ ಹಾಕಿಸಿಕೊಳ್ಳುವುದು ಮತ್ತು ಚಿಕ್ಕ ಮಕ್ಕಳು ರಾಚಣ್ಣ ಕಡೆ ಹೇಳುವ ಸಂಪ್ರದಾಯಗಳು ಜಾತ್ರೆ ಬಂದ ಭಕ್ತರ ಮೆಚ್ಚುಗೆ ಪಡೆದವು
ಜಾತ್ರಾ ಉತ್ಸವದಲ್ಲಿ ಆಂದ್ರ ತಮಿಳುನಾಡು ಮಹಾರಾಷ್ಟ್ರ ಸೇರಿದಂತೆ ಬೆಂಗಳೂರು ಕೂಪ್ಪಳ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆ ಗಳ ಸಹಸ್ರಾರು ಭಕ್ತರು ರಥೋತ್ಸವ ದಲ್ಲಿ ಪಾಲ್ಗೊಂಡ ಕರುಣಾಸಿಂಧು ರಾಚೋಟೇಶ್ವರ ದರ್ಶನ ಪಡೆದರು ಮುಂಜಾನೆ ಮಧ್ಯಾಹ್ನ ಹಾಗೂ ಸಂಜೆ ಮೂರು ಹೂತ್ತು ಅರ್ಚಕರಿಂದ ಅವತಾರ ಗೂಳುವ( ಯುವಕ ತರುಣ ಹಾಗೂ ವೃದ್ಧನಂತೆ) ರಾಚಣ್ಣನ ಶೃಂಗಾರದ ಅಂಲಕಾರ ವಿಶೇಷವಾಗಿ ಮಹಿಳಾ ಭಕ್ತರನ್ನು ಮೋಡಿಗೂಳಿಸಿತು
ಮನರಂಜನಾ ಕಾರ್ಯಕ್ರಗಳು ಮಾ.೨೮ ರಥೋತ್ಸವ ದಿನ ರಾತ್ರಿ ೧೦ ಕ್ಕೆ ಕುಮಾರೇಶ್ವರ ಕೃಪಾ ಪೋಷಿತ ಪಂಡಿತ ಪಂಚಾಕ್ಷರಿ ಗವಾಯಿಗಳು ನಾಟ್ಯ ಸಂಘದಿAದ ನವಲಗುಂದ ಶ್ರೀ ಅಜಾತ ನಾಗಲಿಂಗ ಲೀಲೆ ಭಕ್ತಿ ಪ್ರಧಾನ ನಾಟಕ ಜರುಗಿತ್ತು
ಅಗ್ನಿ ಮಹೋತ್ಸವ ಈ ಜಾತ್ರೆಯ ವಿಶೇಷ ಆಕರ್ಷಣೆ ಮಾ.೨೯ ಅಗ್ನಿ ಮಹೋತ್ಸವ ನೆಡಯಲಿದೆ ಭಾನುವಾರ ರಾತ್ರಿ ಭಕ್ತರು ಉಗ್ರ ಸ್ವರೂಪಿ ರಾಚೋಟೇಶ್ವರನಲ್ಲಿ ತಮ್ಮ ಹರಕ್ಕೆ ತೀರಿಸಲು ಇಷ್ಟಾರ್ಥ ಸಿದ್ಧಿಗಾಗಿ ಕೆಂಡದ ರಾಶಿ ಮೇಲೆ ಒದ್ದೆ ಬಟ್ಟೆಯಲ್ಲಿ ಅಗ್ನಿ ಹಾಯುವ ದೃಶ್ಯ ಶ್ರದ್ಧೆ ಭಕ್ತಿಯ ಪರಾಕಾಷ್ಠೆ ಮೇಳೆಸುತ್ತದೆ ಈ ಆಚರಣೆಯಲ್ಲಿ ರಾಜ್ಯದ ಪ್ರಮುಖ ಸ್ಥಳ ಭಕ್ತಾದಿಗಳು ಪಾಲ್ಗೊಳ್ಳುವುದು ವಿಶೇಷ
ನಂತರ ಕರುನಾಡ ಕಲಾ ತರುಣ ನಾಟ್ಯ ಸಂಘದಿಂದ ಕೆರೂರ ಇದರಿಂದ ಕುಂಟಕೋಣ ಮೂಕ ಜಾಣ ನಾಟಕ ಪ್ರದರ್ಶನ ಗೋಳಲಿದೆ ಮಾ ೩೦ ರಿಂದ ೧ ರವರಗೆ ಮೂರು ದಿನ ರಾಚಣ್ಣ ಕುಸ್ತಿ ಅಖಾಡದಲ್ಲಿ ಜಂಗೀ ನಿಕಾಲಿ ಕುಸ್ತಿ ಪಂದ್ಯಗಳು ಕೀಡ್ರಾ ಪ್ರೇಮಿಗಳ ಮನತಣ ಸುವ ಮೂಲಕ ಜಾತ್ರೆಯ ಸೂಬಗಿಗೆ ಮೆರುಗು ಕೆರೂರ ಪೋಲಿಸ್ ಠಾಣೆಯ ಪಿ ಎಸ್ ಐ ಬೀಮಪ್ಪ ರಬಕವಿ, ಐ ಎಂ ಹಿರೇಗೌಡ್ರ ಮತ್ತು ಸಿಬ್ಬಂದಿ ಸೂಕ್ತ ಬಂದೋಬಸ್ತ ಒದಗಿಸಲಾಗಿತ್ತು
ಜೀರ್ಣೊದ್ದಾರ ಸಮಿತಿಯ ಆರ್.ಆರ್. ಶೆಟ್ಟರ, ಬಸವರಾಜ .ಶೆಟ್ಟರ, ಪುಂಡಲೀಕ ಪತ್ತಾರ, ಬಿ.ಬಿ.ನಿಲುಗಲ್, ಎಸ್.ಆರ್. ಯಂಡಿಗೇರಿ, ಬಸವರಾಜ ದಂಡಿನ, ಎಸ್.ಎಸ್.ಯಂಡಿಗೇರಿ, ಜಿ.ಎಚ್.ಘಟ್ಟದ, ಎಮ್.ಎಸ್.ಪಾಟೀಲ, ಸಿ.ಎಂ.ಘಟ್ಟದ, ಬಸಯ್ಯ ಮಠಪತಿ ಅರ್ಚಕರು, ರಾಚಪ್ಪ ಶೆಟ್ಟರ, ರಾಚಪ್ಪ ಮುದಕವಿ, ಬಸವರಾಜ ಬಂತಿ, ಮಹಾಂತೇಶ ಘಟ್ಟದ, ಕಳಕಪ್ಪ ಪಟ್ಟಣಶೆಟ್ಟಿ, ವಿಜಯಕುಮಾರ ಐಹೊಳ್ಳಿ, ಮಲ್ಲನಗೌಡ ಪಾಟೀಲ ಹಾಜರಿದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ