ಬಾಗಲಕೋಟೆ–ವಿಜಯಪುರ ನಿರಾಶ್ರಿತರಿಗೆ ಉದ್ಯೋಗ: ಕೈಗಾರಿಕೆ ಯೋಜನೆ ತರಲು ಸಭೆಯಲ್ಲಿ ಪಿ.ಎಚ್. ಪೂಜಾರ್ ಪ್ರಶ್ನೆ

ಬೆಂಗಳೂರಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವರಾದ ಶ್ರೀ ಎಂ.ಬಿ. ಪಾಟೀಲ್ ಅವರಿಗೆ ಬಾಗಲಕೋಟೆ ಹಾಗೂ ವಿಜಯಪುರ ಅವಳಿ ಜಿಲ್ಲೆಗಳಲ್ಲಿ ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ನಿರಾಶ್ರಿತರಿಗೆ ಉದ್ಯೋಗ ಕಲ್ಪಿಸುವ ಕುರಿತು ಪ್ರಶ್ನೆ ಕೇಳಲಾಯಿತು. 

 ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್. ಪೂಜಾರ್ ಅವರು ಕೈಗಾರಿಕೆ ಯೋಜನೆಗಳನ್ನು ಜಾರಿಗೆ ತಂದು ಸ್ಥಳೀಯರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಹೊಸ ಯೋಜನೆಗಳನ್ನು ತರಬೇಕೆಂದು ಕಲಾಪದಲ್ಲಿ ಒತ್ತಾಯಿಸಿದರು. ಈ ಕುರಿತು ಸಚಿವರು ಸುದೀರ್ಘವಾಗಿ ಉತ್ತರಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಾಮೆಂಟ್‌ಗಳು