ಮುಧೋಳ: ಯುದ್ಧದ ಪರಿಣಾಮ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಕೊರತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಎಥೆನಾಲ್ ಸ್ಟೌವ್ ಬಳಸಲು ಸರ್ಕಾರ ಪ್ರೋತ್ಸಾಹಿಸಬೇಕು ಎಂದು ನಿರಾಣಿ ಉದ್ಯಮ ಸಮೂಹದ ಅಧ್ಯಕ್ಷ ಹಾಗೂ ಮಾಜಿ ಸಚಿವ ಮುರುಗೇಶ ನಿರಾಣಿ ಸಲಹೆ ನೀಡಿದ್ದಾರೆ.
2004ರಲ್ಲಿ ಅಭಿವೃದ್ಧಿಯಾದ ಎಥೆನಾಲ್ ಸ್ಟೌವ್ ಸರಳ ತಂತ್ರಜ್ಞಾನ ಹೊಂದಿದ್ದು ಕೆರೋಸಿನ್ ಸ್ಟೌವ್ ಮಾದರಿಯಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಸುಮಾರು 24 ಲಕ್ಷ ಕುಟುಂಬಗಳು ಇದನ್ನು ಬಳಸುತ್ತಿವೆ. ಎಲ್‌ಪಿಜಿಗಿಂತ ಬೆಲೆ ತುಸು ಹೆಚ್ಚಿದ್ದರೂ ಇದು ಪರಿಸರ ಸ್ನೇಹಿ ಮತ್ತು ಸುರಕ್ಷಿತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪುಣೆಯ ನಿಂಬಕರ್ ಕೃಷಿ ಸಂಶೋಧನಾ ಕೇಂದ್ರ ಈ ಸ್ಪಿಲೆಸ್ ಸ್ಟೀಲ್ ಎಥೆನಾಲ್ ಸ್ಟೌವ್ ಅಭಿವೃದ್ಧಿಪಡಿಸಿದೆ. ಕಬ್ಬು, ಮೆಕ್ಕೆಜೋಳ, ಕಳಪೆ ಗುಣಮಟ್ಟದ ಅಕ್ಕಿ, ಹುಲ್ಲು, ಸಿಹಿ ಜೋಳ ಮುಂತಾದ ಕೃಷಿ ಉತ್ಪನ್ನಗಳಿಂದ ಎಥೆನಾಲ್ ತಯಾರಿಸಬಹುದಾಗಿದೆ. ಗೃಹಬಳಕೆಯಲ್ಲಿ ಇದನ್ನು ಬಳಸಿದರೆ ರೈತರಿಗೆ ಉತ್ತಮ ಮಾರುಕಟ್ಟೆ ದೊರೆಯಲಿದೆ ಎಂದು ನಿರಾಣಿ ಹೇಳಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ