ಬಾದಾಮಿ:ವಸತಿ ನಿಲಯ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

 


ಬಾದಾಮಿ: ಪ.ಪಂ‌.ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಸರಕಾರದ ವಸತಿ ನಿಲಯ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಅವರು ರವಿವಾರ ಪಟ್ಟಣದ ಹೊರವಲಯದ ಎಂ.ಎಲ್.ಬಿ.ಸಿ.ಐಬಿ ಹಿಂದಗಡೆ ಪಟ್ಟಣಶೆಟ್ಟಿ ಲೇ ಔಟ್ ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರೂ.514 ಲಕ್ಷ ಅನುದಾನದ ವೆಚ್ಚದಡಿ ಪ.ಪಂ.ಸಮುದಾಯದ ವಸತಿ ನಿಲಯ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಪ್ರಾರಂಭದಿಂದಲೇ ಗುಣಮಟ್ಟದ ಶಿಕ್ಷಣ ನೀಡಲು ಆದ್ಯತೆ ನೀಡಬೇಕು. ಮಕ್ಕಳು ವಸತಿ ನಿಲಯದಲ್ಲಿ ಇದ್ದು, ಉತ್ತಮವಾಗಿ ಓದಿ ಸತ್ಪ್ರಜೆಗಳಾಗಬೇಕು ಎಂದು ಹೇಳಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಸ್.ಮಳಿಮಠ ಮಾತನಾಡಿ ಕ್ಷೇತ್ರಕ್ಕೆ ಮಂಜೂರಾಗಿರುವ ವಸತಿನಿಲಯಗಳ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಹಿರೇಮಢ, ಮುಖಂಡರಾದ ಮಂಜುನಾಥ ಹೊಸಮನಿ, ಬಸವರಾಜ ತಳವಾರ, ಕೋಣಪ್ಪ ಕಾಟನ್ನವರ, ಬಸವರಾಜ ಪಾತ್ರೋಟ, ಬಸವರಾಜ ಡೊಳ್ಳಿನ, ರಂಗನಾಥ ಮೇಟಿಕಲ್, ಮಹಾಂತೇಶ ಹಟ್ಟಿ, ಶೇಖರ ಚಿಂತಾಕಲ್, ದಾದೂ ಇಟಗಿ, ಕನಕಪ್ಪ ಪರಸನ್ನವರ, ಆನಂದ ದೊಡಮನಿ, ಆನಂದ ಮರಡಿತೋಟದ, ಪಿಡಬ್ಲೂಡಿ ಸಹಾಯಕ ಅಭಿಯಂತರ ಯಲ್ಲಪ್ಪ ಆಡಿನ, ಸೇರಿದಂತೆ ಇತರರು ಹಾಜರಿದ್ದರು. ‌ಕಾರ್ಯಕ್ರಮದಲ್ಲಿ ಪ.ಪಂ.ಸಮಾಜದ ಮುಖಂಡರು ಉಪಸ್ಥಿತರಿದ್ದರು. ಡಿ.ವೈ.ಹೊಸಮನಿ‌ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

ಕಾಮೆಂಟ್‌ಗಳು