ಜಮಖಂಡಿ:ಜಮಖಂಡಿಯಲ್ಲಿ ಹಳೆಯ ಜೈಲು ಸ್ಥಳದಲ್ಲಿ ‘ಸಿಂಧೂರ ಲಕ್ಷ್ಮಣ ಮಾರುಕಟ್ಟೆ’ ಉದ್ಘಾಟನೆ – ವ್ಯಾಪಾರಸ್ಥರಿಗೆ ಹೊಸ ಆಶಾಕಿರಣ
ಜಮಖಂಡಿ: ನಗರದ ಹಳೆಯ ಜೈಲು ಇದ್ದ ಸ್ಥಳವನ್ನು ಸುಂದರವಾಗಿ ಅಭಿವೃದ್ಧಿಪಡಿಸಿ “ಸಿಂಧೂರ ಲಕ್ಷ್ಮಣ ಮಾರುಕಟ್ಟೆ”ಯಾಗಿ ಪರಿವರ್ತಿಸಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಈ ಮಾರುಕಟ್ಟೆಯ ಉದ್ಘಾಟನೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿದ್ದು, ಸಾರ್ವಜನಿಕರಲ್ಲಿ ಸಂತಸದ ವಾತಾವರಣ ಮೂಡಿಸಿದೆ.
ಸ್ವಲ್ಪ ವಿಳಂಬವಾದರೂ ಉದ್ಘಾಟನೆ ನೆರವೇರಿಸಿದ ಮಾನ್ಯ ಶಾಸಕರಿಗೆ ನಾಗರಿಕರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲವಾಗಲೆಂದು ಈ ಯೋಜನೆಯನ್ನು ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಪ್ರಾರಂಭಿಕವಾಗಿ ಮುಂದಿಟ್ಟಿದ್ದರು ಎಂಬುದು ತಿಳಿದುಬಂದಿದೆ.
ಅವರ ಸೂಚನೆಯಂತೆ ನಗರಸಭೆ ಅಧ್ಯಕ್ಷರು ಹಾಗೂ ಮಾಜಿ ಅಧ್ಯಕ್ಷರು ಸ್ಥಳದ ಕಾಂಕ್ರೀಟಿಕರಣ ಕಾರ್ಯ ಕೈಗೊಂಡಿದ್ದು, ಪೌರಾಯುಕ್ತರ ಮಾರ್ಗದರ್ಶನದಲ್ಲಿ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಯೋಜನೆಗೆ ಕಾರಣಕರ್ತರಾದ ಆನಂದ ನ್ಯಾಮಗೌಡ ಅವರಿಗೆ ಸಾರ್ವಜನಿಕರು ಧನ್ಯವಾದ ಸಲ್ಲಿಸಿದ್ದಾರೆ.
ಇದೇ ವೇಳೆ, ಮಾರುಕಟ್ಟೆಯನ್ನು ಅಧಿಕೃತವಾಗಿ ಉದ್ಘಾಟಿಸಿದ ಶಾಸಕರಿಗೂ ಅಭಿನಂದನೆಗಳು ವ್ಯಕ್ತವಾಗಿವೆ. ನಗರಸಭೆ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಹಾಗೂ ಪೌರಾಯುಕ್ತರ ಸಹಕಾರದಿಂದ ಈ ಯೋಜನೆ ರೂಪುಗೊಂಡಿರುವುದು ಪ್ರಶಂಸನೀಯವಾಗಿದೆ.
ಹೊಸ ಮಾರುಕಟ್ಟೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಸುಸಜ್ಜಿತ ಸ್ಥಳ ದೊರೆಯುವುದರ ಜೊತೆಗೆ, ನಗರದಲ್ಲಿನ ಟ್ರಾಫಿಕ್ ಸಮಸ್ಯೆ ಕೂಡ ಬಹುಮಟ್ಟಿಗೆ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ