ಮುಧೋಳ:ಮಂಟೂರದಲ್ಲಿ ಮಕ್ಕಳ ನೃತ್ಯ ಕಾರ್ಯಕ್ರಮ: ಸಚಿವ ಆರ್.ಬಿ. ತಿಮ್ಮಾಪೂರ ಪ್ರಶಂಸೆ

ಮುಧೋಳ: ಮಂಟೂರ ಗ್ರಾಮದ ಗೋಲಶೆಟ್ಟಿ ಅವರ ಶಾಲೆಯಲ್ಲಿ ಭಾನುವಾರ ಮಕ್ಕಳ ನೃತ್ಯ ಕಾರ್ಯಕ್ರಮ ನಡೆಯಿತು. 


ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಾಲಾ ಮಕ್ಕಳ ನೃತ್ಯ ಪ್ರದರ್ಶನವು ಕೇವಲ ಕಲಾ ಪ್ರದರ್ಶನವಷ್ಟೇ ಅಲ್ಲದೆ ಆತ್ಮವಿಶ್ವಾಸ, ಶಿಸ್ತು, ತಂಡದ ಒಗ್ಗಟ್ಟು ಹಾಗೂ ಸಾಂಸ್ಕೃತಿಕ ಜಾಗೃತಿಯ ಪ್ರತೀಕವಾಗಿದೆ ಎಂದು ಅವರು ಹೇಳಿದರು. ಮಂಟೂರ ಗ್ರಾಮದ ಮಕ್ಕಳ ಪ್ರತಿಭೆ ಮತ್ತು ಉತ್ಸಾಹ ಹೆಮ್ಮೆ ತರುವಂತಿದ್ದು, ಇಂತಹ ಕಾರ್ಯಕ್ರಮಗಳು ಗ್ರಾಮೀಣ ಮಕ್ಕಳಲ್ಲಿ ಕಲಾ ಆಸಕ್ತಿ ಬೆಳೆಸುವುದರ ಜೊತೆಗೆ ವ್ಯಕ್ತಿತ್ವ ಅಭಿವೃದ್ಧಿಗೂ ಸಹಕಾರಿಯಾಗುತ್ತವೆ ಎಂದರು.

ರಾಜ್ಯ ಸರ್ಕಾರ ಗ್ರಾಮೀಣ ಶಾಲೆಗಳಲ್ಲಿ ಕಲಾ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ. ಈ ಮಕ್ಕಳ ನೃತ್ಯದ ಹೆಜ್ಜೆಗಳು ಭವಿಷ್ಯದಲ್ಲಿ ದೊಡ್ಡ ವೇದಿಕೆಗಳನ್ನು ತಲುಪಲಿ ಎಂದು ಆಶಿಸಿದರು.

ಕಾಮೆಂಟ್‌ಗಳು