ಬಾಗಲಕೋಟೆಗೆ ನಿಮ್ಮ ಕೊಡುಗೆ ಏನು? – ಚರಂತಿಮಠ ವಿರುದ್ಧ ರಮೇಶ್ ಬದ್ನೂರು ಕಿಡಿ

"ಮಾತು ಮಾತ್ರ ಸಾಲದು, ಕಾರ್ಯ ತೋರಿಸಿ” –ಮಾಜಿ ಶಾಸಕರ ವಿರುದ್ಧ ಸುದ್ದಿಗೋಷ್ಠಿಯಲ್ಲಿ  ಬದ್ನೂರ  ಟೀಕೆ

By Petkarmedia news Desk|Bagalkot

ಬಾಗಲಕೋಟೆ:ಬಾಗಲಕೋಟೆ ಅಭಿವೃದ್ಧಿ ವಿಚಾರವಾಗಿ ಚರಂತಿಮಠ ಅವರ ವಿರುದ್ಧ ರಮೇಶ್ ಬದ್ನೂರು ತೀವ್ರ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಧಿವೇಶನದಲ್ಲಿ ಕೇವಲ ಜನರಿಗೆ ತೋರಿಸಲು ಮಾತ್ರ ಮಾತನಾಡುವುದು ಸರಿಯಲ್ಲ. ಶಾಸಕರಾಗಿ ಒಂದೇ ಒಂದು ಬಾರಿ ಕೂಡ ಬಾಗಲಕೋಟೆಗೆ ಮೆಡಿಕಲ್ ಕಾಲೇಜು ಅನುದಾನಕ್ಕಾಗಿ ಲಿಖಿತವಾಗಿ ಒತ್ತಾಯಿಸಿದ್ದೀರಾ?” ಎಂದು ಪ್ರಶ್ನಿಸಿದರು.

“ಉಚಿತ ಮತ್ತು ಗುಣಮಟ್ಟದ ಚಿಕಿತ್ಸೆಯ ಅಗತ್ಯವಿರುವ ಬಡ ಜನರ ಬಗ್ಗೆ ಯೋಚನೆ ಇಲ್ಲ. ಮಾತಿನಲ್ಲಿ ಮಾತ್ರ ಅಭಿವೃದ್ಧಿ ಹೇಳುವುದರಿಂದ ಪ್ರಯೋಜನ ಇಲ್ಲ” ಎಂದು ಅವರು ಟೀಕಿಸಿದರು.

ಇನ್ನಷ್ಟು ಆಕ್ರೋಶ ವ್ಯಕ್ತಪಡಿಸಿದ ಬದ್ನೂರು, “ಶಾಸಕರಾಗಿದ್ದಾಗ ನೀವು ಬಾಗಲಕೋಟೆಗೆ ಏನು ಕೊಟ್ಟಿದ್ದೀರಿ? ನಿಮ್ಮ ಕೊಡುಗೆ ಏನು ಎಂಬುದನ್ನು ಜನರಿಗೆ ಹೇಳಬೇಕು. ನಗರಕ್ಕೆ ವಿಶೇಷ ಯೋಜನೆಗಳು, ಬಡವರ ಮಕ್ಕಳ ಪುನರ್ವಸತಿ ಮತ್ತು ಪುನರ್ ನಿರ್ಮಾಣ ವಿಚಾರದಲ್ಲಿ ಯಾವುದೇ ಕೆಲಸ ಮಾಡಿಲ್ಲ” ಎಂದು ಆರೋಪಿಸಿದರು.

“ಕೇವಲ ಉಚಿತ ಭರವಸೆಗಳು ಮತ್ತು ಭಾಷಣಗಳಿಂದ ಅಭಿವೃದ್ಧಿ ಸಾಧ್ಯವಿಲ್ಲ. ಕಾರ್ಯದ ಮೂಲಕವೇ ಜನರ ವಿಶ್ವಾಸ ಗಳಿಸಬೇಕು” ಎಂದು ಹೇಳಿದರು.

ಕಾಮೆಂಟ್‌ಗಳು