ಬಾಗಲಕೋಟೆ: ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ನವನಗರದಲ್ಲಿ ಭರ್ಜರಿ ಮತಯಾಚನೆ

ಬಾಗಲಕೋಟೆ: ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ನವನಗರದಲ್ಲಿ ಭರ್ಜರಿ ಮತಯಾಚನೆ

By Petkarmedia news Desk: Bagalkot

ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಶ್ರೀ ವೀರಣ್ಣ ಚರಂತಿಮಠರ ಪರವಾಗಿ ನವನಗರದಲ್ಲಿ ಪಕ್ಷದ ಹಿರಿಯ ನಾಯಕರು ಭರ್ಜರಿ ಪ್ರಚಾರ ನಡೆಸಿದರು.


ನವನಗರದ ವಾರ್ಡ್ ಸಂಖ್ಯೆ 20 ರ ಸೆಕ್ಟರ್ ನಂ. 62863ರಲ್ಲಿ ನಡೆದ ಪ್ರಚಾರ ಕಾರ್ಯದಲ್ಲಿ ಬಿಜೆಪಿ ಹಿರಿಯ ನಾಯಕರಾದ ಶ್ರೀ ಜಿ.ಎನ್. ಪಾಟೀಲ, ಶ್ರೀ ಪ್ರಭುಸ್ವಾಮಿ ಸರಗಣಾಚಾರಿ ಹಾಗೂ ಡಾ. ನವೀನ ಚರಂತಿಮಠ ಭಾಗವಹಿಸಿ ಮನೆಮನೆಗೆ ತೆರಳಿ ಮತಯಾಚನೆ ನಡೆಸಿದರು.

ಈ ವೇಳೆ ವಾರ್ಡ್ ನಿವಾಸಿಗಳು ಪ್ರಸಕ್ತ ಆಡಳಿತ ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ವಾರ್ಡ್ ಅಭಿವೃದ್ಧಿ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು. ಹಿಂದಿನ ಬಿಜೆಪಿ ಶಾಸಕರ ಆಡಳಿತಾವಧಿಯಲ್ಲಿ ನೈರ್ಮಲ್ಯ ಮತ್ತು ಅಭಿವೃದ್ಧಿ ಉತ್ತಮವಾಗಿತ್ತು ಎಂದು ಹೇಳಿದ ಸ್ಥಳೀಯರು, ಈ ಬಾರಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರಿಗೆ ನೂರಕ್ಕೆ ನೂರು ಬೆಂಬಲ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಚಾರದಲ್ಲಿ ಶಕ್ತಿಕೇಂದ್ರ ಪ್ರಮುಖರು, ವಾರ್ಡ್‌ನ ಮಾಜಿ ಸದಸ್ಯರು ಹಾಗೂ ಪಕ್ಷದ ಪದಾಧಿಕಾರಿಗಳು ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದರು. ನಾಗರತ್ನ ಹೆಬ್ಬಳ್ಳಿ, ಬಡಿಗೇರ, ಮಹಾಂತೆಶ ಬಾದೊಡಗಿ, ರೇಣುಕಾ ಹಿರೇಮಠ, ಬಸವರಾಜ ತೋಟದ, ವಿಶ್ವನಾಥ ಪಾಟೀಲ, ರಾಜು ನಾಯ್ಕರ, ರಾಜು ರವಣಕರ, ಭಾಗಿರಥಿ ಪಾಟೀಲ, ಬಸವರಾಜ ಹೆಬ್ಬಳ್ಳಿ, ಕಾಂತು ಖಾತೆದಾರ, ಅನಿತಾ ಸರೊದೆ, ಸರೋಜಿನಿ ವಾಡಕರ, ಸುಮಾ ಇಂಗಳಗಿ ಸೇರಿದಂತೆ ಹಲವರು ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಈ ಕುರಿತು ಬಿಜೆಪಿ ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಕಾಮೆಂಟ್‌ಗಳು