ಉಪಚುನಾವಣಾ ಅಭ್ಯರ್ಥಿಗಳ ಖರ್ಚು-ವೆಚ್ಚಗಳ ತಪಾಸಣೆ
By Petkarmedia news desk| Bagalkot
ಬಾಗಲಕೋಟೆ :ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆ-2026 ಹಿನ್ನಲೆಯಲ್ಲಿ ವೆಚ್ಚ ವೀಕ್ಷಕರು ಜನಪ್ರತಿನಿಧಿಗಳ ಕಾಯ್ದೆ 1951 ರ ಕಲಂ 77(1)ರ ಪ್ರಕಾರ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ದೈನಂದಿನ ಖರ್ಚು ವೆಚ್ಚಗಳ ತಪಾಸಣೆಯನ್ನು ನಡೆಸಲಿದ್ದಾರೆ.
ಮೊದಲನೇ ತಪಾಸಣೆ ಮಾರ್ಚ 30, ಎರಡನೇ ತಪಾಸಣೆ ಎಪ್ರೀಲ್ 3 ಹಾಗೂ ಮೂರನೇ ತಪಾಸಣೆ ಎಪ್ರೀಲ್ 7 ರಂದು ನಡೆಸಲಾಗುತ್ತದೆ. ಸದರಿ ದಿನಗಳಂದು ತಾವು ಚುನಾವಣಾ ಏಜೆಂಟರುಗಳ ಮೂಲಕ ಬಿಳಿ ಬಣ್ಣದ ದೈನಂದಿನ ಖರ್ಚು ವೆಚ್ಚಗಳ ಪುಸ್ತಕ ಭಾಗ-ಎ, ಗುಲಾಬಿ ಬಣ್ಣದ ನಗದು ಪುಸ್ತಕ ಭಾಗ-ಬಿ ಮತ್ತು ಹಳದಿ ಬಣ್ಣದ ಬ್ಯಾಂಕ್ ನಗದು ಪುಸ್ತಕ ಭಾಗ-ಸಿ ಪುಸ್ತಕಗಳನ್ನು ಕಾಲೋಚಿತಗೊಳಿಸಿ ಚುನಾವಣಾಧಿಕಾರಿಗಳ ಕಚೇರಿ ಬಾಗಲಕೋಟೆಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ನಡೆಯುವ ಅಭ್ಯರ್ಥಿಗಳ ಲೆಕ್ಕ ಪತ್ರಗಳ ಈ ತಪಾಸಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ಚುನಾವಣಾಧಿಕಾರಿ ಸಂತೋಷ ಜಗಲಾಸರ ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ