ಯತ್ನಾಳ್ ಅವರ ಬಾಯಿಗೆ ಮತ್ತು ತಲೆಗೆ ಕನೆಕ್ಷನ್ ಇಲ್ಲ: ಪಾಟೀಲ

ಯತ್ನಾಳ್ ವಿರುದ್ಧ ಎಂ.ಬಿ. ಪಾಟೀಲ್ ಟೀಕೆ: ಧರ್ಮದ ವಿಚಾರಕ್ಕೆ ರಾಜಕೀಯ ಬೇಡ

By Petkarmedia news desk| Bagalkot

ಬಾಗಲಕೋಟ:ಯತ್ನಾಳ್ ಅವರ ಬಾಯಿಗೆ ಮತ್ತು ತಲೆಗೆ ಕನೆಕ್ಷನ್ ಇಲ್ಲ” ಎಂದು ಸಚಿವ ಎಂ.ಬಿ.ಪಾಟೀಲ್  ತೀವ್ರವಾಗಿ ಟೀಕಿಸಿದರು.

ಭಾನುವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಧರ್ಮದ ವಿಚಾರಗಳನ್ನು ರಾಜಕೀಯಕ್ಕೆ ಬಳಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ರಂಜಾನ್ ಸಂದರ್ಭದಲ್ಲಿ ನಡೆಯುವ ಪ್ರಾರ್ಥನೆ ಹಾಗೂ ಇತರೆ ಧಾರ್ಮಿಕ ಆಚರಣೆಗಳನ್ನು ಅನಗತ್ಯವಾಗಿ ರಾಜಕೀಯಕ್ಕೆ ಜೋಡಿಸುವುದು ತಪ್ಪು ಎಂದು ಹೇಳಿದರು.

“ನಾವು ಎಲ್ಲ ಧರ್ಮಗಳಿಗೆ ಸಮಾನ ಗೌರವ ನೀಡುತ್ತೇವೆ. ಬೌದ್ಧ, ಜೈನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ನಮ್ಮ ನಡೆ. ಇದರಲ್ಲಿ ಯಾವುದೇ ಹೊಸದಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.

ಹಾಗೆಯೇ, ಪಾಕಿಸ್ತಾನ ಅಥವಾ ಟಿಪ್ಪು ಸುಲ್ತಾನ್ ವಿಷಯಗಳನ್ನು ಎಳೆದು ತರುವ ಮೂಲಕ ಜನರ ಗಮನ ಬೇರೆಡೆಗೆ ತಿರುಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.

ಧಾರ್ಮಿಕ ವಿಷಯಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಬಾರದು ಎಂಬುದು ತಮ್ಮ ನಿಲುವು ಎಂದು ಅವರು ತಿಳಿಸಿದರು.

ಕಾಮೆಂಟ್‌ಗಳು