ಬಾಗಲಕೋಟೆ :ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಮಾರ್ಚ ೧೧ ರಂದು ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೧.೩೦ ವರೆಗೆ ಬಾಗಲಕೋಟೆ ತಾಲೂಕಾ ಪಂಚಾಯತ ಕಾರ್ಯಾಲಯದಲ್ಲಿ ಜನಸಂಪರ್ಕ ಸಭೆಯನ್ನು ಆಯೋಜಿಸಿದ್ದಾರೆ.
ಸಾರ್ವಜನಿಕರಿಗೆ ಸರಕಾರಿ ಕಚೇರಿಗಳಲ್ಲಿ ಅಧಿಕೃತ ಕೆಲಸಗಳನ್ನು ಮಾಡಿಕೊಡುವಲ್ಲಿ ವಿನಾಕಾರಣ ವಿಳಂಬ ಹಾಗೂ ಇನ್ನಿತರ ತೊಂದರೆ ಆಗಿದ್ದರೆ ಅಂತಹ ಅಧಿಕಾರಿ ಮತ್ತು ನೌಕರರ ವಿರುದ್ದ ಸಾರ್ವಜನಿಕರು ಸಭೆಗೆ ಹಾಜರಾಗಿ ತಮ್ಮ ಲಿಖಿತ ದೂರುಗಳನ್ನು ಸಲ್ಲಿಸಿದಲ್ಲಿ ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳಬಹುದಾದ ದೂರುಗಳನ್ನು ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಇತ್ಯರ್ಥಪಡಿಸಲಾಗುತ್ತದೆ. ಇತ್ಯರ್ಥವಾಗದೇ ಇದ್ದಲ್ಲಿ ಅಂತ ದೂರುಗಳನ್ನು ನಮೂನೆ ನಂ.೧ ಮತ್ತು ೨ರಲ್ಲಿ ಸ್ವೀಕರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಅಧೀಕ್ಷಕರು (೯೩೬೪೦೬೨೫೧೦), ಪೊಲೀಸ್ ಉಪಾದೀಕ್ಷಕರು (೯೩೬೪೦೬೨೫೫೮), ಪೊಲೀಸ್ ನಿರೀಕ್ಷಕರು-೧ (೯೩೬೪೦೬೨೬೪೧), ಪೊಲೀಸ್ ನಿರೀಕ್ಷಕರು-೨ (೯೩೬೪೦೬೨೪೨), ಪೊಲೀಸ್ ನಿರೀಕ್ಷಕರು-೩ (೯೩೬೪೦೬೨೬೪೩) ಮತ್ತು ಬಾಗಲಕೋಟೆ ಲೋಕಾಯುಕ್ತ ಕಚೇರಿ ದೂಸಂ.೦೮೩೫೪-೨೩೬೨೦೦, ೨೯೫೧೭೦ಗೆ ಸಂಪರ್ಕಿಸುವAತೆ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ