ಬಾಗಲಕೋಟ: ಹಬ್ಬದ ಸಂಭ್ರಮಕ್ಕೆ ಪ್ರಸಿದ್ಧಿ ಪಡೆದಿರುವ ಬಾಗಲಕೋಟೆ ನಗರದಲ್ಲಿ ಕಾಮಣ್ಣನ ದಹನದ ಮೊದಲ ದಿನವೇ ಸಂಭ್ರಮ ತಾರಕ್ಕೇರಿತು. ದೇಶದಲ್ಲಿ ಕಲ್ಕತ್ತಾ ನಂತರ ಹೋಳಿ ಆಚರಣೆಯಲ್ಲಿ ಬಾಗಲಕೋಟೆಗೆ ವಿಶೇಷ ಸ್ಥಾನವಿದೆ ಎಂದು ಹೇಳಲಾಗುತ್ತದೆ.
ಕಾಮಣ್ಣನ ದಹನದ ಬಳಿಕ ರಾತ್ರಿ ನಡೆದ ಸೋಗಿನ ಬಂಡಿ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು. ಸಾರ್ವಜನಿಕ ಗಣೇಶೋತ್ಸವದ ರೂವಾರಿಗಳಾದ ಲೋಕಮಾನ್ಯ ಬಾಲಗಂಗಾಧರ ತಿಲಕ, ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಪಂಡರಾಪುರದ ವಿಠಲ ಭಕ್ತ ಸಂತ ಮಹಾರಾಜರ ವೇಷಭೂಷಣದ ಸೋಗುಗಳು ವಿಶೇಷ ಆಕರ್ಷಣೆಯಾಗಿದ್ದವು.
ಯುವಕರು ಹಲಗೆ ಬಾರಿಸುತ್ತಾ ನಗರದ ಗಲ್ಲಿ-ಗಲ್ಲಿಗಳಲ್ಲಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಸೋಗಿನ ಮೆರವಣಿಗೆ ನಡೆಸಿದರು. ಕಿಲ್ಲಾ ಮಿತ್ರ ಮಂಡಳಿ ಸೇರಿದಂತೆ ಹಲವು ಮಂಡಳಿಗಳ ಸದಸ್ಯರು ತಮ್ಮ ಸೋಗಿನ ಕಲೆಯನ್ನು ಪ್ರದರ್ಶಿಸಿ ಹೋಳಿ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದರು..



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ