ಬಾಗಲಕೋಟೆ:ಪೊಲೀಸರ ಅಂತರಾತ್ಮದಲ್ಲೂ ಭಕ್ತಿ: ಪಾದಯಾತ್ರಿಗಳಿಗೆ ನೆರವಾದ ಎಸ್‌ಪಿ ದಂಪತಿ

ಬಾಗಲಕೋಟೆ: ಭಕ್ತಿ ಪ್ರಚಾರಕ್ಕಾಗಿ ಅಲ್ಲ, ಆತ್ಮಸಂತೃಪ್ತಿಗಾಗಿ ಎಂಬುದನ್ನು ಸಾರುವ ಘಟನೆಯೊಂದು ನಗರ ಸಮೀಪದ ಹಮಾಲರ ಕಾಲೋನಿ ಬಳಿ ಕಂಡುಬಂತು.




ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಅವರು ತಮ್ಮ ಧರ್ಮಪತ್ನಿ ಹಾಗೂ ಪುಟ್ಟ ಮಗುವಿನೊಂದಿಗೆ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಪಾದಯಾತ್ರೆ ನಡೆಸುತ್ತಿದ್ದ ಭಕ್ತರಿಗೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ನೆರವಾದರು. ಅವರೊಂದಿಗೆ ಗನ್‌ಮ್ಯಾನ್ ಹಾಗೂ ಚಾಲಕರಷ್ಟೇ ಇದ್ದರು.

ಪಾದಯಾತ್ರಿಗಳಿಗೆ ನೀರು, ಆಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡುತ್ತಾ ದಂಪತಿ ದೈವ ಸೇವೆಯಲ್ಲಿ ತೊಡಗಿಕೊಂಡಿರುವುದು ಗಮನ ಸೆಳೆಯಿತು.

ಈ ದೃಶ್ಯವನ್ನು ಚಿತ್ರೀಕರಿಸಲು ಮುಂದಾದಾಗ, “ನಾವು ಮಾಡುತ್ತಿರುವುದು ಪ್ರಚಾರಕ್ಕಾಗಿ ಅಲ್ಲ, ಆತ್ಮತೃಪ್ತಿಗಾಗಿ” ಎಂದು ಎಸ್‌ಪಿ ಗೋಯಲ್ ವಿನಮ್ರವಾಗಿ ಹೇಳಿ ಫೋಟೋ–ವಿಡಿಯೋ ಮಾಡದಂತೆ ಮನವಿ ಮಾಡಿದರು ಎಂದು ರಮೇಶ್ ಬಗಲಿ ಅವರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.

ಎಸ್‌ಪಿ ದಂಪತಿಯ ಈ ನಿಸ್ವಾರ್ಥ ಸೇವೆ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ.

ಕಾಮೆಂಟ್‌ಗಳು