ಬಾಗಲಕೋಟೆ: ಜಿಲ್ಲೆಯ ಜಮಖಂಡಿ ನಗರದಲ್ಲಿ ಅಚ್ಚರಿ ಮೂಡಿಸುವ ಘಟನೆ ನಡೆದಿದೆ. ಮೃತಪಟ್ಟಿದ್ದಾನೆ ಎಂದು ಭಾವಿಸಿದ್ದ ವ್ಯಕ್ತಿ ಮಾರ್ಗಮಧ್ಯೆ ಮತ್ತೆ ಉಸಿರಾಟ ಆರಂಭಿಸಿದ ಘಟನೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
ಜಮಖಂಡಿ ನಗರದ ಮೋಮಿನ್ ಗಲ್ಲಿಯ ನಿವಾಸಿಯಾದ ಹಾಜಿ ಮುಬಾರಕ್ ಅವಟಿ (65) ಅವರಿಗೆ ಕಿಡ್ನಿ ಫೇಲ್ಯೂರ್ ಹಾಗೂ ಹೃದಯಾಘಾತ ಉಂಟಾದ ಹಿನ್ನೆಲೆಯಲ್ಲಿ ಬೆಳಗಾವಿಯ KLE ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ವೆಂಟಿಲೇಟರ್ ಮೇಲೆ ಚಿಕಿತ್ಸೆ ಪಡೆಯುತ್ತಿದ್ದರು.
ವೈದ್ಯರು ಬದುಕುವ ಸಾಧ್ಯತೆ ಕಡಿಮೆ ಎಂದು ತಿಳಿಸಿದ್ದ ಹಿನ್ನೆಲೆ ಕುಟುಂಬಸ್ಥರು ಡಿಸ್ಚಾರ್ಜ್ ಅಗೇನ್ಸ್ಟ್ ಮೆಡಿಕಲ್ ಅಡ್ವೈಸ್ (DAMA) ಮೂಲಕ ವೆಂಟಿಲೇಟರ್ ತೆಗೆದು ಅವರನ್ನು ಮನೆಗೆ ಕರೆತರುತ್ತಿದ್ದರು.
ಈ ವೇಳೆ ವೆಂಟಿಲೇಟರ್ ತೆಗೆದ ಬಳಿಕ ಉಸಿರಾಟ ಕಾಣಿಸದ ಕಾರಣ ಮುಬಾರಕ್ ಅವಟಿ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಭಾವಿಸಿದ್ದರು. ಅಂತಿಮ ಸಂಸ್ಕಾರಕ್ಕಾಗಿ ಅವರನ್ನು ಜಮಖಂಡಿಗೆ ಕರೆತರುತ್ತಿದ್ದ ವೇಳೆ ಲೋಕಾಪುರ ಬಳಿ ರಸ್ತೆ ಹಂಪ್ಸ್ ದಾಟುವಾಗ ಹಠಾತ್ ಉಸಿರಾಟ ಕಾಣಿಸಿಕೊಂಡಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಈ ಘಟನೆ ನಿನ್ನೆ ಸಂಜೆ ಸುಮಾರು 7 ಗಂಟೆ ಸುಮಾರಿಗೆ ನಡೆದಿದೆ. ತಕ್ಷಣ ಅವರನ್ನು ಜಮಖಂಡಿ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದು ರಾತ್ರಿ ಜಮಖಂಡಿಯಲ್ಲಿ ಸಾವಿರಾರು ಜನರು ಆಸ್ಪತ್ರೆ ಬಳಿ ಜಮಾಯಿಸಿದ್ದರು.
🩺 ವೈದ್ಯರ ಸ್ಪಷ್ಟನೆ
ಜಮಖಂಡಿ ತಾಲೂಕು ಆಸ್ಪತ್ರೆಯ ವೈದ್ಯ ಡಾ. ಕೃಷ್ಣಾ ಬಣ್ಣದ ಅವರು ನೀಡಿದ ಮಾಹಿತಿಯಂತೆ, ಬೆಳಗಾವಿಯ ಆಸ್ಪತ್ರೆಯಿಂದ ನೀಡಿದ ಕೇಸ್ ಪೇಪರ್‌ನಲ್ಲಿ ಮುಬಾರಕ್ ಅವಟಿ ಮೃತಪಟ್ಟಿದ್ದಾರೆ ಎಂಬುದು ಎಲ್ಲೂ ನಮೂದಿಸಿಲ್ಲ.
ವೈದ್ಯರು ಬದುಕುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಿರಬಹುದು. ವೆಂಟಿಲೇಟರ್ ತೆಗೆದ ಬಳಿಕ ಉಸಿರಾಟ ಕಾಣಿಸದ ಕಾರಣ ಕುಟುಂಬಸ್ಥರು ಮೃತಪಟ್ಟಿದ್ದಾರೆ ಎಂದು ಭಾವಿಸಿದ್ದಾರೆ. ಮಾರ್ಗಮಧ್ಯೆ ರಸ್ತೆ ಹಂಪ್ಸ್ ದಾಟುವಾಗ ಮತ್ತೆ ಉಸಿರಾಟ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ ಎಂದು ತಿಳಿಸಿದ್ದಾರೆ.
#Jamkhandi #Bagalkote #BreakingNews #KarnatakaNews #PetkarMedia #ViralNews


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ