ಸಿಎಂ ಭೇಟಿಮಾಡಿದ ಮೇಟಿ ಕುಟುಂಬ: ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ – ಸಿಎಂ ಸಿದ್ದರಾಮಯ್ಯ
By Petkarmedia news Desk|Bagalkot
ಬಾಬಾಗಲಕೋಟ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಮೇಟಿ ಕುಟುಂಬದೊಂದಿಗೆ ನಡೆದ ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.
ಮೇಟಿ ಕುಟುಂಬದ ಸದಸ್ಯರೊಂದಿಗೆ ಚರ್ಚೆ ನಡೆಸಿರುವುದಾಗಿ ತಿಳಿಸಿದ ಅವರು, “ಕುಟುಂಬದ ಮೂವರು ಟಿಕೆಟ್ ಆಕಾಂಕ್ಷಿಗಳಿದ್ದು, ಯಾರಿಗೆ ಟಿಕೆಟ್ ನೀಡಿದರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದೇವೆ. ಈ ಕುರಿತು ಒಪ್ಪಿಗೆ ವ್ಯಕ್ತವಾಗಿದೆ,” ಎಂದರು.
ಇನ್ನೂ ಕೆಲವರು ಬಂಡಾಯವಾಗಿ ಸ್ಪರ್ಧಿಸುವ ಸೂಚನೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, “ಸಭೆಯ ಬಳಿಕ ಒಟ್ಟಿಗೆ ಸುದ್ದಿಗೋಷ್ಠಿ ನಡೆಸುವಂತೆ ಸೂಚಿಸಿದ್ದೇವೆ. ಆದರೆ ಕೆಲವರು ಅದಕ್ಕೆ ಒಪ್ಪಿಲ್ಲ,” ಎಂದು ಹೇಳಿದರು.
ಡಿಎಚ್‌ಒ (DHO) ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, “ಅದು ಸರ್ಕಾರದ ಆಡಳಿತಾತ್ಮಕ ವಿಚಾರ. ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿಲ್ಲ,” ಎಂದು ಸ್ಪಷ್ಟಪಡಿಸಿದರು.
“ಒಂದು ಕುಟುಂಬದ ಟಿಕೆಟ್ ವಿಚಾರವನ್ನು ವಿಧಾನಸೌಧದಲ್ಲಿ ಚರ್ಚೆ ಮಾಡಿರುವುದು ಅಪರೂಪ. ಆದರೆ ಅಂತಿಮ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಸ್ಥಳೀಯ ವರದಿ ಆಧಾರವಾಗಿ ಡಿಕೆ ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ,” ಎಂದು ಸಿಎಂ ತಿಳಿಸಿದರು.
👉 ಇನ್ನಷ್ಟು ಅಪ್‌ಡೇಟ್‌ಗಳಿಗೆ Petkar Media ಫಾಲೋ ಮಾಡಿ
#BagalkoteByElection #KarnatakaPolitics #Siddaramaiah #Congress #TicketFight #PoliticalDrama #ByElection2026 #BagalkoteNews #BreakingNews #PetkarMedia #KannadaNews #ViralNews #ElectionUpdate #TrendingKarnataka


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ