ಕಾಂಗ್ರೆಸ್ ಮುಖಂಡ ಮನೋಹರ ಏಳಮ್ಮಿ ತಂಡ ಸೇರ್ಪಡೆ
By Petkarmedia new desk|Bagalkot
ಬಾಗಲಕೋಟೆ: ಉಪಚುನಾವಣೆಯ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು, ಕಾಂಗ್ರೆಸ್ ಮುಖಂಡ ಮನೋಹರ ಏಳಮ್ಮಿ ಸೇರಿದಂತೆ ಹಲವು ಮುಖಂಡರು ಭಾರತೀಯ ಜನತಾ ಪಕ್ಷಕ್ಕೆ ಗುರುವಾರ ಸೇರ್ಪಡೆಯಾದರು.
ಬಿಜೆಪಿ ಹಾಗೂ ಡಾ. ವೀರಣ್ಣ ಚರಂತಿಮಠ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ಮನೋಹರ ಏಳಮ್ಮಿ, ಸಂದೀಪ ಏಳಮ್ಮಿ, ಸಂಗಪ್ಪ ಕರಿಗೊಂಡ, ಚಂದ್ರು ಪುಜಾರ, ಬಸವರಾಜ ಕುದರಿ, ಬಸವರಾಜ ಏಳಮ್ಮಿ, ಶ್ರೀಶೈಲ್ ಏಳಮ್ಮಿ, ಮತ್ತು ಸಿದ್ದಪ್ಪ ಘಾಡದ ಅವರು ಈ ಸೇರ್ಪಡೆಯಾದರು. ರಾಜ್ಯಸಭಾ ಸದಸ್ಯ ನಾರೋಯಣಸಾ ಭಾಂಡಗೆ, ಡುಂಡಪ್ಪ ಏಳಮ್ಮಿಯವರ, ಸಂಗಮೇಶ ತಿಮ್ಮಣ್ಣವರ, ಸುರೇಶ ಮಜ್ಜಗಿ ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ