ಬಿಜೆಪಿ ಮನೆ ಮನೆ ಸಂಪರ್ಕ: ಉಪಚುನಾವಣೆಗೆ ಸಂಘಟಿತ ಸಜ್ಜು – ರಾಜು ನಾಯ್ಕರ

ಬಿಜೆಪಿ ಮನೆ ಮನೆ ಸಂಪರ್ಕ: ಉಪಚುನಾವಣೆಗೆ ಸಂಘಟಿತ ಸಜ್ಜು – ರಾಜು ನಾಯ್ಕರ

By Petkarmedia news desk| Bagalkot


ಬಾಗಲಕೋಟೆ, ಮಾ.21:ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಕಾರ್ಯಕರ್ತರು ಮನೆ ಮನೆ ಸಂಪರ್ಕ ಕಾರ್ಯಕ್ರಮದ ಮೂಲಕ ಮತಯಾಚನೆ ನಡೆಸಿದ್ದು, ಪಕ್ಷ ಸಂಘಟಿತವಾಗಿ ಸಮರಕ್ಕೆ ಸಜ್ಜಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ತಿಳಿಸಿದ್ದಾರೆ.

ನಗರದ 22, 23, 15 ಹಾಗೂ 2ನೇ ವಾರ್ಡ್‌ಗಳಲ್ಲಿ ನಡೆದ ಮನೆ ಮನೆ ಸಂಪರ್ಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಬಾಗಲಕೋಟೆ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಅಭಿವೃದ್ಧಿ ಶೂನ್ಯವಾಗಿದೆ. ನಗರ ಸ್ವಚ್ಛತೆ ಸಮಸ್ಯೆ, ಬಿಟಿಡಿಎಯಲ್ಲಿ ಸಂತ್ರಸ್ತರಿಗೆ ಪರಿಹಾರ ಸಿಗದಿರುವುದು ಹಾಗೂ ಜನಸಾಮಾನ್ಯರ ಕೆಲಸಗಳು ನಿಂತಿರುವುದರಿಂದ ಜನತೆ ಬೇಸತ್ತಿದ್ದಾರೆ,” ಎಂದು ಆರೋಪಿಸಿದರು.

ಈ ಬಾರಿ ಜನತೆ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಲು ಸಿದ್ಧರಾಗಿದ್ದು, ಪಕ್ಷದ ಸಿದ್ಧಾಂತಗಳು ಮತ್ತು ಸಂಘಟನೆ ಶಕ್ತಿಯೇ ಗೆಲುವಿಗೆ ಆಧಾರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. “ಜನಸೇವೆಯೇ ನಮ್ಮ ಗುರಿ. ಈ ಉಪಚುನಾವಣೆಯಲ್ಲಿ ಬಿಜೆಪಿ ಖಂಡಿತ ಗೆಲುವು ಸಾಧಿಸುತ್ತದೆ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಂಬಾಜಿ ಜೋಷಿ, ಯಲ್ಲಪ್ಪ ಭಜಂತ್ರಿ, ರಾಜು ಬಾಡದ, ಗಣೇಶ ಲಗಳಿ, ಸುರೇಶ ಪವಾರ, ಬಿ.ಎಲ್. ಭಜಂತ್ರಿ, ರಮೇಶ ಕಾಂಬಳೆ, ಸುರೇಶ ಲಮಾಣಿ, ಸಂತೋಷ ಪಡಸಲಗಿ, ಅನೀಲ ಚವ್ಹಾಣ, ರವಿ ರಾಠೋಡ, ಸಾಗರ ಚವ್ಹಾಣ, ವಿಠ್ಠಲ್ ಅಂಬಿಗೇರ, ಯಮನೂರಿ ಅಂಬಿಗೇರ, ಕೆ.ಟಿ. ಲಮಾಣಿ, ಈರಪ್ಪ ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು