ಸೇವೆ ಮುಂದುವರಿಸಲು ಕೈ ಬಲಪಡಿಸಿ: ಉಮೇಶ ಮೇಟಿ

ಸೇವೆ ಮುಂದುವರಿಸಲು ಕೈ ಬಲಪಡಿಸಿ: ಉಮೇಶ ಮೇಟಿ

By Petkarmedia news desk| Bagalkot

ಬಾಗಲಕೋಟೆ, ಮಾ.25: ಗ್ರಾಮೀಣ ಜನರ ಸೇವೆ ನಮ್ಮ ತಂದೆಯವರ ಕನಸಾಗಿದ್ದು, ಆ ಕನಸು ಸಾಕಾರಗೊಳಿಸಲು ಮತ್ತೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಅಭ್ಯರ್ಥಿ ಉಮೇಶ ಮೇಟಿ ಮನವಿ ಮಾಡಿದರು.

ತಾಲೂಕಿನ ಸೀತಿಮಣಿ ಗ್ರಾಮದಲ್ಲಿ ಬುಧವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಜನರ ಆಶೀರ್ವಾದದಿಂದ ಆಯ್ಕೆಯಾಗಿದ್ದ ಎಚ್.ವೈ.ಮೇಟಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದ್ದರು. ಅವರ ಕನಸುಗಳನ್ನು ನನಸು ಮಾಡಲು ಮತ್ತೊಮ್ಮೆ ಆಶೀರ್ವಾದಿಸಬೇಕು ಎಂದರು.

ಇದೇ ವೇಳೆ ಹಿರೇಮ್ಯಾಗೇರಿ, ಚಿಕ್ಕಮ್ಯಾಗೇರಿ, ಡೊಮನಾಳ, ಸುತಗುಂಡಾರ, ಮಂಕಣಿ, ದೇವಲಾಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ದಿನಪೂರ್ತಿ ಪ್ರಚಾರ ನಡೆಸಿದರು.

 👍

ಕಾಮೆಂಟ್‌ಗಳು